ದಿನದ ಸುದ್ದಿ

‘ಬೂತಗೊಜ್ಜು’ ಇದು ಉತ್ತರಕನ್ನಡದ ಸಾಂಪ್ರದಾಯಕ ಅಡಿಗೆ

Published

on

  • ಶಶಿಕಲಾ ಸುನೀಲ್, ಗಾಯಕಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು

  • ತೋತಾಪುರಿ ಮಾವಿನಕಾಯಿ – 1
  • ಕೊಬ್ಬರಿ ಎಣ್ಣೆ – ಅರ್ಧ ಬಟ್ಟಲು
  • ಬೆಳ್ಳುಳ್ಳಿ – 8 ಎಸಳು
  • ಬೆಲ್ಲ – 4 ಚಮಚ
  • ಅಚ್ಚಖಾರದಪುಡಿ – 3 ಚಮಚ
  • ಸಾಸಿವೆ
  • ಉದ್ದಿನಬೇಳೆ – 1ಚಮಚ
  • ಕರಿಬೇವು – 2 ಕಡ್ಡಿ
  • ಉಪ್ಪು ರುಚಿಗೆ

ಮಾಡುವ ವಿಧಾನ

ಮಾವಿನಕಾಯಿಯನ್ನು ಕುಕ್ಕರ್ನಲ್ಲಿ ನೀರು ಹಾಕಿ 6 ವಿಶೇಸ್ ಕೂಗಿಸಿ. ಸಿಪ್ಪೆ ಬಿಡಿಸಿ ತಿರುಳನ್ನು ಮಾತ್ರ ತೆಗೆದು ಮ್ಯಾಷ್ ಮಾಡಿ. ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಸಣ್ಣಗೆ ಜಜ್ಜಿದ ಬೆಳ್ಳುಳ್ಳಿ, ಉದ್ದಿನಬೇಳೆ, ಕರಿಬೇವು ಹಾಕಿ ಕೆಂಪಗೆ ಹುರಿದು ಮ್ಯಾಷ್ ಮಾಡಿದ ಮಾವಿನಕಾಯಿಯನ್ನು ಹಾಕಿ ಅಚ್ಚಖಾರದಪುಡಿ, ಬೆಲ್ಲ, ರುಚಿಗೆ ಉಪ್ಪು ಹಾಕಿ ಮಾವಿನಕಾಯನ್ನು ಬೇಯಿಸಲು ಉಪಯೋಗಿಸದ ನೀರನ್ನು ಹಾಕಿ ಸಣ್ಣ ಉರಿಯಲ್ಲಿ 20 ನಿಮಿಷ ಬೇಯಿಸಿ.

ಮಾವಿನ ಹುಳಿಯ ಅನುಸಾರ ಸಿಹಿ, ಉಪ್ಪು ಖಾರ ಹಾಕಿ. ಇದನ್ನು ಬಿಸಿ ಅನ್ನದೊಂದಿಗೆ ಸವಿಯಲು ಚಂದ. ಚಪಾತಿ, ರೊಟ್ಟಿಯೊಂದಿಗೆ ಕೂಡ ಸವಿಯಲು ಚಂದ.ಬಹಳ ದಿನಗಳ ಕಾಲ ಇದನ್ನು ಶೇಖರಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version