ದಿನದ ಸುದ್ದಿ

ದಾಖಲೆ ಪ್ರಮಾಣದ ರಫ್ತು, ಜಿಎಸ್‌ಟಿ ಸಂಗ್ರಹ ; ಭಾರತದ ಆರ್ಥಿಕತೆ ಪುನರುಜ್ಜೀವನದ ಪ್ರತಿಬಿಂಬ : ಪಿಯೂಷ್ ಗೋಯಲ್

Published

on

ಸುದ್ದಿದಿನ ಡೆಸ್ಕ್ : ದಾಖಲೆ ಪ್ರಮಾಣದ ರಫ್ತು ಹಾಗೂ ಸರಕು ಮತ್ತು ಸೇವಾ ತೆರಿಗೆ-ಜಿಎಸ್‌ಟಿ ಸಂಗ್ರಹ ಭಾರತದ ಆರ್ಥಿಕತೆಯ ಪುನರುಜ್ಜೀವನದ ಪ್ರತಿಬಿಂಬವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ನವ ದೆಹಲಿಯಲ್ಲಿ ನಿನ್ನೆ ಇಂಡಿಯನ್ ಮರ್ಚೆಂಟ್ಸ್ ಚೇಂಬರ್ ಇಂಡಿಯಾ ಕಾಲಿಂಗ್ ಕಾನ್ಫರೆನ್ಸ್‌ನ ಉದ್ಘಾಟನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿವರು, ದೇಶದ ಒಟ್ಟಾರೆ ರಫ್ತು ಸಾರ್ವಕಾಲಿಕ ಗರಿಷ್ಠ 675ಶತಕೋಟಿ ಅಮೆರಿಕನ್ ಡಾಲರ್‌ಗಳಾಗಿದೆ. ಕಳೆದ ತಿಂಗಳಲ್ಲಿ ಒಂದು ಲಕ್ಷ 68ಸಾವಿರ ಕೋಟಿ ರೂಪಾಯಿಗಳ ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಅವರು ಹೇಳಿದರು.

ದೇಶವು ಕ್ರಮೇಣ ಉನ್ನತ ದರ್ಜೆಯ, ಉನ್ನತ ತಂತ್ರಜ್ಞಾನ ಉತ್ಪಾದನಾ ಆರ್ಥಿಕತೆಯತ್ತ ಸಾಗುತ್ತಿದೆ. ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಕಡಿತ, ವ್ಯವಹಾರವನ್ನು ಸುಲಭಗೊಳಿಸುವುದು, ಎಫ್‌ಡಿಐ ನೀತಿ ಸುಧಾರಣೆಗಳು, ಅನುಸರಣೆ ಹೊರೆಯಲ್ಲಿ ಕಡಿತ ಮತ್ತು ಮೇಕ್ ಇನ್ ಇಂಡಿಯಾದ ಕೆಲವು ಉಪಕ್ರಮಗಳು ಹಾಗೂ ಹೂಡಿಕೆಗಳನ್ನು ಉತ್ತೇಜಿಸಲು ಕೇಂದ್ರ ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಈ ಫಲಿತಾಂಶಗಳಿಗೆ ಕಾರಣವಾಗಿದೆ ಎಂದು ಪಿಯೂಶ್ ಗೋಯೆಲ್ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version