ಬಹಿರಂಗ

ಗಣರಾಜ್ಯೋತ್ಸವದ ಈ ದಿನ ಆಚರಣಾ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಫೋಟೊ ಏಕೆ ಇಡಬೇಕೆಂದರೆ..!

Published

on

  • ರಘೋತ್ತಮ ಹೊ.ಬ

ಣರಾಜ್ಯೋತ್ಸವದ ಈ ದಿನ ಆಚರಣಾ ಕಾರ್ಯಕ್ರಮಗಳಲ್ಲಿ ಯಾರ ಫೋಟೊ ಇಡಬೇಕು? ಅಥವಾ ಯಾರ ಸಾಧನೆ ಸ್ಮರಿಸಬೇಕು ಎಂಬ ಪ್ರಶ್ನೆ ಅಲ್ಲಲ್ಲಿ ಹುಟ್ಟಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ “ಗಣ” ಅಂದರೆ group of people “ರಾಜ್ಯ” ಅಂದರೆ government ಎಂದರ್ಥ.

Means ಜನತೆಯ ರಾಜ್ಯ ಅಥವಾ ಆಡಳಿತ, ಒಟ್ಟಾರೆ ಪ್ರಜಾ ಪ್ರಭುತ್ವ ಎಂದರ್ಥ. Simple ಹೇಳೋದಾದರೆ it is the day of democracy. ಈ day of democracy ಅಥವಾ ಪ್ರಜಾಪ್ರಭುತ್ವದ ದಿನ ಭಾರತದಲ್ಲಿ ಉದ್ಭವವಾಗಲು ಕಾರಣ? ಹಾಗೆಯೇ ಅಂದು ಅದು ಉದ್ಭವವಾದ ಆ ದಿನ (1950 ಜನವರಿ 26) ಏನಾದರೂ ಘಟಿಸಿಯೇ ಇರಬೇಕಲ್ಲವೇ?

ಹೌದು, ಅಂದು ಭಾರತದಲ್ಲಿ ಸಂವಿಧಾನ ಜಾರಿಯಾಗಿದೆ. ಆ ಸಂವಿಧಾನದ ಪ್ರಧಾನ ಶಿಲ್ಪಿ ಅಥವಾ Chief Architect? ಹೌದು, ಅದು ಬಾಬಾಸಾಹೇಬ್ ಅಂಬೇಡ್ಕರ್ ಅಲ್ಲದೇ ಬೇರಾರೂ ಅಲ್ಲ ಮತ್ತು ಈ ಹಿನ್ನೆಲೆಯಲ್ಲಿ ಹಾಗೆ ಎಲ್ಲರಿಗೂ ಅರ್ಥ ಆಗಿರಬೇಕು ಯಾಕೆ ಈ ದಿನ ಬಾಬಾಸಾಹೇಬ್ ಅಂಬೇಡ್ಕರ್ ರನ್ನು ಸ್ಮರಿಸಬೇಕು, ಅವರ ಸಂವಿಧಾನ ರಚನಾ ಶ್ರಮ ಮತ್ತು ಸಾಧನೆಯನ್ನು ಸ್ಮರಿಸಬೇಕು ಎಂದು.

ಅಂದಹಾಗೆ ಬೇರೆ ರಾಷ್ಟ್ರ ನಾಯಕರುಗಳನ್ನು ಸ್ಮರಿಸಬೇಡಿ ಎಂದಲ್ಲ, ಆದರೆ ಕಡ್ಡಾಯವಾಗಿ ಬಾಬಾಸಾಹೇಬ್ ಅಂಬೇಡ್ಕರ್ ರನ್ನು ಸ್ಮರಿಸಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರ ಇಡಿ ಅಷ್ಟೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version