ದಿನದ ಸುದ್ದಿ

ಗಣರಾಜ್ಯೋತ್ಸವ ಪರೇಡ್‌ | ಕರ್ನಾಟಕಕ್ಕೆ ಎರಡನೇ ಅತ್ಯುತ್ತಮ ಸ್ಥಬ್ದಚಿತ್ರ ಬಿರುದು

Published

on

ಎರಡನೇ ಸ್ಥಾನ ಪಡೆದ ಸ್ತಬ್ಧ ಚಿತ್ರ

ಸುದ್ದಿದಿನ ಡೆಸ್ಕ್ : ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಬ್ದಚಿತ್ರಗಳಲ್ಲಿ ಕರ್ನಾಟಕಕ್ಕೆ ಎರಡನೇ ಅತ್ಯುತ್ತಮ ಸ್ಥಬ್ದಚಿತ್ರ ಎನ್ನುವ ಬಿರುದು ಸಿಕ್ಕಿದ್ದು ಈ ಕುರಿತು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಆಧಾರಿತ ಸ್ಥಬ್ದಚಿತ್ರಕ್ಕೆ ಕರ್ನಾಟಕಕ್ಕೆ ಎರಡನೇ ಸ್ಥಾನ ಲಭಿಸಿದೆ.

ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ಗಣರಾಜ್ಯೋತ್ಸವ 2022 ರಲ್ಲಿ ಕರ್ನಾಟಕದ ಸ್ಥಬ್ದಚಿತ್ರ 2 ನೇ ಸ್ಥಾನವನ್ನು ಗೆದ್ದಿರುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ‘ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಕಾಶಿ ವಿಶ್ವನಾಥ ಧಾಮ’ ಥೀಮ್ ಅನ್ನು ಆಧರಿಸಿದ್ದು ಇದಕ್ಕೆ ಮೊದಲನೇ ಸ್ಥಾನ ಸಿಕ್ಕಿದೆ ಮತ್ತು ಮೇಘಾಲಯವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version