ದಿನದ ಸುದ್ದಿ
ಧಾರವಾಡ | ಅ.14 ರಂದು ‘ಮಾಜಿ ಸೈನಿಕರ ಸಮ್ಮೇಳನ’
ಸುದ್ದಿದಿನ, ಧಾರವಾಡ | ಮಾಜಿ ಸೈನಿಕರ ಸಮ್ಮೇಳನವನ್ನು ಮರಾಠಾ ಲೈಟ್ ಇನಫೆಂಟ್ರಿ ರೆಜಿಮೆಂಟಲ್ ಸೆಂಟರ್, ಬೆಳಗಾವಿ ಇವರು ಅ.14 ರಂದು ಮುಂಜಾನೆ 9 ಗಂಟೆಗೆ ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಏರ್ಪಡಿಸಲಾಗಿದೆ.
ಭೂದಳ, ನೌಕಾದಳ ಮತ್ತು ವಾಯುದಳಗಳ ಮಾಜಿ ಸೈನಿಕರ ಕುಂದುಕೊರತೆ ಮತ್ತು ಅವರ ಕುಟುಂಬದವರಿಗೆ ಕೇಂದ್ರ ಸರ್ಕಾರದಿಂದ ನೀಡುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಲೆಫ್ಟಿನೆಂಟ್ ಜನರಲ್ ಎಸ್. ಟಿ. ಉಪಾಸನಿ, ಮೇಜರ ಜನರಲ್ ಸಂಜೀವ ನಾರೀಯನ್, ಎ.ವ್ಹಿ.ಎಸ್.ಎಮ್ ಜನರಲ್ ಆಫೀಸರ್ ಕಮಾಂಡಿಂಗ್, ಕರ್ನಾಟಕ ಮತ್ತು ಕೇರಳಾ ಸಬ್ ಏರಿಯಾದ ಬ್ರಿಗೇಡಿಯರ್ ಗೋವಿಂದ ಕಾಲವಾಡ ಹಾಗೂ ಕಮಾಂಡೆಂಟ ಮರಾಠಾ ರೆಜೆಮೆಂಟಲ್ ಸೆಂಟರ್ ಬೆಳಗಾವಿ ಇವರು ಆಗಮಿಸುವರು.
ಭೂದಳ, ವಾಯುದಳ, ನೌಕಾದಳದ ಅಭಿಲೇಖ ಕಾರ್ಯಾಲಯದಿಂದ, ಬ್ಯಾಂಕುಗಳಿಂದ, ಮಾಜಿ ಸೈನಿಕರ, ಯುದ್ಧ ಸಂತ್ರಸ್ತರ ಪಿಂಚಣಿ ಮತ್ತು ಇತರ ಸಮಸ್ಯೆಗಳ ನಿವಾರಣೆ ಮತ್ತಿತರ ಅಹವಾಲುಗಳಿಗೆ ಸ್ಪಂದಿಸುವರು. ಯುದ್ಧ ಸಂತ್ರಸ್ತರು, ಮಾಜಿ ಸೈನಿಕರು ಮತ್ತು ಅವಲಂಬಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ವಿಂಗ್ ಕಮಾಂಡರ್(ನಿ) ಈಶ್ವರ ಕೊಡೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401