ಲೈಫ್ ಸ್ಟೈಲ್

ಪಾಚಿ ಬಣ್ಣದ ರಾಯಲ್ ಎನ್ ಫೀಲ್ಡ್ ಮಾರುಕಟ್ಟೆಗೆ

Published

on

ಸುದ್ದಿ ದಿನ ಡೆಸ್ಕ್:  ಎರಡನೇ ಮಹಾಯುದ್ಧದ ಸಂಕೇತವಾದ ಪಾಚಿ ಬಣ್ಣದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಮತ್ತೆ ಮಾರುಕಟ್ಟೆಗೆ ಬಂದಿವೆ.
ಕೇವಲ ಸೇನೆಯಲ್ಲಿರುವವರಿಗೆ ಮಾತ್ರ ಈ ಬಣ್ಣದ ಬೈಕ್ ನೀಡಬೇಕೆಂಬ ಷರತ್ತಿದ್ದರಿಂದ, ಪಾಚಿ ಬಣ್ಣದ ಬುಲೆಟ್ ಬೈಕ್‌ಗೆ ಭಾರಿ ಬೇಡಿಕೆ ಇತ್ತು.
ಇದೀಗ  ಕಂಪನಿಯು ಪೆಗಾಗಸ್ ಹೆಸರಿನ ಪಾಚಿ ಬಣ್ಣದ 250 ಲಿಮಿಟೆಡ್ ಎಡಿಶನ್ ಬೈಕ್‌ಗಳನ್ನು ಮಾರಾಟ ಮಾಡಲು ಸಿದ್ಧವಾಗಿದ್ದು, ಇದನ್ನು ರಾಯಲ್ ಎನ್‌ಫೀಲ್ಡ್ ವೆಬ್‌ಸೈಟ್‌ನಲ್ಲಿ ಮಾತ್ರ ಖರೀದಿಸಲು ಸಾಧ್ಯ.
ಈ ಬೈಕ್‌ನ ಆನ್ ರೋಡ್ ಬೆಲೆ 2.49 ಲಕ್ಷ ರೂಪಾಯಿ (ಮುಂಬಯಿಯಲ್ಲಿ) ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಾಯಲ್ ಎನ್‌ಫೀಲ್ಡ್ ಪೆಗಾಗಸ್ ಸರಣಿ ಬೈಕ್‌ಗಳು ಎರಡನೇ ಮಹಾಯುದ್ಧದಲ್ಲಿ ಬಳಕೆಯಾಗುತ್ತಿದ್ದ  ಫ್ಲೈಯಿಂಗ್ ಫ್ಲೀ 125 ಬೈಕ್‌ಅನ್ನು ಹೋಲುತ್ತವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಫ್ಲೈಯಿಂಗ್ ಫ್ಲೀ ಬೈಕ್‌ಗಳು ಯೂರೋಪ್‌ನಲ್ಲಿ ತಯಾರಾಗುತ್ತಿದ್ದವು. ಈ ಬೈಕ್‌ಗಳ ಸ್ಮರಣಾರ್ಥವಾಗಿ ಪೆಗಾಗಸ್ ಸರಣಿಯನ್ನು ಪರಿಚಯಿಸಲಾಗುತ್ತಿದೆ ಎಂದು ಕಂಪನಿಯು  ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

Trending

Exit mobile version