Connect with us

ಲೈಫ್ ಸ್ಟೈಲ್

ಪಾಚಿ ಬಣ್ಣದ ರಾಯಲ್ ಎನ್ ಫೀಲ್ಡ್ ಮಾರುಕಟ್ಟೆಗೆ

Published

on

ಸುದ್ದಿ ದಿನ ಡೆಸ್ಕ್:  ಎರಡನೇ ಮಹಾಯುದ್ಧದ ಸಂಕೇತವಾದ ಪಾಚಿ ಬಣ್ಣದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಮತ್ತೆ ಮಾರುಕಟ್ಟೆಗೆ ಬಂದಿವೆ.
ಕೇವಲ ಸೇನೆಯಲ್ಲಿರುವವರಿಗೆ ಮಾತ್ರ ಈ ಬಣ್ಣದ ಬೈಕ್ ನೀಡಬೇಕೆಂಬ ಷರತ್ತಿದ್ದರಿಂದ, ಪಾಚಿ ಬಣ್ಣದ ಬುಲೆಟ್ ಬೈಕ್‌ಗೆ ಭಾರಿ ಬೇಡಿಕೆ ಇತ್ತು.
ಇದೀಗ  ಕಂಪನಿಯು ಪೆಗಾಗಸ್ ಹೆಸರಿನ ಪಾಚಿ ಬಣ್ಣದ 250 ಲಿಮಿಟೆಡ್ ಎಡಿಶನ್ ಬೈಕ್‌ಗಳನ್ನು ಮಾರಾಟ ಮಾಡಲು ಸಿದ್ಧವಾಗಿದ್ದು, ಇದನ್ನು ರಾಯಲ್ ಎನ್‌ಫೀಲ್ಡ್ ವೆಬ್‌ಸೈಟ್‌ನಲ್ಲಿ ಮಾತ್ರ ಖರೀದಿಸಲು ಸಾಧ್ಯ.
ಈ ಬೈಕ್‌ನ ಆನ್ ರೋಡ್ ಬೆಲೆ 2.49 ಲಕ್ಷ ರೂಪಾಯಿ (ಮುಂಬಯಿಯಲ್ಲಿ) ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಾಯಲ್ ಎನ್‌ಫೀಲ್ಡ್ ಪೆಗಾಗಸ್ ಸರಣಿ ಬೈಕ್‌ಗಳು ಎರಡನೇ ಮಹಾಯುದ್ಧದಲ್ಲಿ ಬಳಕೆಯಾಗುತ್ತಿದ್ದ  ಫ್ಲೈಯಿಂಗ್ ಫ್ಲೀ 125 ಬೈಕ್‌ಅನ್ನು ಹೋಲುತ್ತವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಫ್ಲೈಯಿಂಗ್ ಫ್ಲೀ ಬೈಕ್‌ಗಳು ಯೂರೋಪ್‌ನಲ್ಲಿ ತಯಾರಾಗುತ್ತಿದ್ದವು. ಈ ಬೈಕ್‌ಗಳ ಸ್ಮರಣಾರ್ಥವಾಗಿ ಪೆಗಾಗಸ್ ಸರಣಿಯನ್ನು ಪರಿಚಯಿಸಲಾಗುತ್ತಿದೆ ಎಂದು ಕಂಪನಿಯು  ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
Click to comment

Leave a Reply

Your email address will not be published. Required fields are marked *

ದಿನದ ಸುದ್ದಿ

ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!

Published

on

ಮಳೆಗಾಲದ ನೀರು ನಿರ್ವಹಣೆಗೆ ಮಹತ್ವದ ಯೋಜನೆ; ರೈಲು ಸಂಚಾರಕ್ಕೂ ಹೊಸ ಸುರಕ್ಷತಾ ಕ್ರಮ

ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ನೀರಿನ ಹರಿವನ್ನು ನಿಯಂತ್ರಿಸುವ ವಿಶೇಷ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಸುಮಾರು 65 ಕಿ.ಮೀ. ಉದ್ದದ ನೀರಿನ ಮಾರ್ಗ ನಿರ್ಮಿಸುವ ಚಿಂತನೆ ನಡೆದಿದೆ.

ನಗರದಲ್ಲಿ ಮಳೆ ಸುರಿದಾಗ ರಸ್ತೆಗಳು ಜಲಾವೃತವಾಗುವುದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀರಿನ ಹರಿವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ.

http://Visit : www.suddidina.com

ಮೆಟ್ರೋ ಮಾರ್ಗದ ಸಮೀಪ ವಿಶೇಷ ವ್ಯವಸ್ಥೆ

ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ಮಧ್ಯದಲ್ಲಿರುವ ಓಲ್ಡ್‌ ಮದ್ರಾಸ್‌ ಗರ್ದನ್‌ಸೇತುವೆಯಲ್ಲಿ ಪ್ರಸಕ್ತ ನೀರು ಹರಿವಿಗೆ ಸಂಬಂಧಿಸಿದ ನಿಯಂತ್ರಣ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ತಂಡದ ಪರಿಶೀಲನೆ ಬಳಿಕ ಗರ್ದನ್‌ಸೇತುವೆ ಸುರಕ್ಷತಾ ತಪಾಸಣೆ ನಡೆಸಲಾಗಿದ್ದು, ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸುವುದರಿಂದ ಜಲಾವೃತ ಸಮಸ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ಉಂಟಾಗುವ ಸಮಸ್ಯೆಗಳಿಗೆ ಇದು ಪ್ರಮುಖ ಪರಿಹಾರ ಕ್ರಮವಾಗಬಹುದು.

ರೈಲು ಸಂಚಾರಕ್ಕೂ ಸುರಕ್ಷತೆ

ರೈಲು ಸುರಕ್ಷತಾ ನಿಯಮಗಳ ಪ್ರಕಾರ ತಾಂತ್ರಿಕ ಮೇಲ್ವಿಚಾರಣೆ ನಡೆಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಿರಂತರ ಮಳೆ ಸುರಿದ ಸಂದರ್ಭದಲ್ಲೂ ರೈಲು ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲಾಗಿದೆ.

ರೈಲು ಸಂಪರ್ಕ ಇರುವ ಪ್ರದೇಶಗಳಲ್ಲಿ ನೀರು ಸಂಗ್ರಹವಾಗುವುದರಿಂದ ಹಳಿಗಳ ಸುರಕ್ಷತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ನೀರು ಹರಿವಿನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ರೈಲು ಮೂಲಸೌಕರ್ಯದ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಲಾಗುತ್ತಿದೆ.

ಮುಂದಿನ ಹಂತದಲ್ಲಿ ದೊಡ್ಡ ಯೋಜನೆ

ಈ ನೀರಿನ ನಿರ್ವಹಣಾ ಕಾಮಗಾರಿಯ ಆಚ್ಚೋಬಲದಂದೇ ವಾರದೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ಬಳಿಕ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಮುಂದಿನ ಹಂತದಲ್ಲಿ ಮಳೆ ನೀರು ಸಂಗ್ರಹಣೆ ಹಾಗೂ ನೀರಿನ ಹರಿವಿನ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳೂ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ನಗರದ ವೇಗದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ವಿಸ್ತರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಳೆ ನೀರು ನಿರ್ವಹಣೆ ಬೆಂಗಳೂರಿಗೆ ಅತ್ಯಂತ ಅಗತ್ಯವಾಗಿದೆ. 65 ಕಿ.ಮೀ. ನೀರು ಮಾರ್ಗದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ, ಮಳೆಗಾಲದ ಜಲಾವೃತ ಸಮಸ್ಯೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ.

Continue Reading

ದಿನದ ಸುದ್ದಿ

ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!

Published

on

ravichandran-political-entry-dk-shivakumar-mlc-nomination
ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!

ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಹೆಚ್ಚಿದ ಕುತೂಹಲ; ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ

ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಜಕೀಯ ಪ್ರವೇಶದ ಕುರಿತು ಇದೀಗ ಚರ್ಚೆ ಜೋರಾಗಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ರವಿಚಂದ್ರನ್ ಭೇಟಿಯಾಗಿದ್ದು, ಈ ಭೇಟಿಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಕುತೂಹಲ ರಾಜಕೀಯ ಹಾಗೂ ಚಿತ್ರರಂಗದ ವಲಯದಲ್ಲಿ ಮೂಡಿದೆ.

ರವಿಚಂದ್ರನ್ ಮತ್ತು ಡಿಕೆ ಶಿವಕುಮಾರ್ ಬಾಲ್ಯದ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳು ಎಂಬುದು ವಿಶೇಷ. ಹೀಗಾಗಿ ಇಬ್ಬರ ಭೇಟಿಯನ್ನು ಕೇವಲ ಸ್ನೇಹಪೂರ್ವಕ ಭೇಟಿ ಎಂದೇ ನೋಡಬೇಕೇ ಅಥವಾ ಇದರ ಹಿಂದೆ ಮತ್ತೇನಾದರೂ ರಾಜಕೀಯ ಬೆಳವಣಿಗೆ ಇದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

http://Visit : www.suddidina.com

ನಾಲ್ಕು ದಶಕಗಳ ಸಿನಿಮಾ ಪಯಣ

ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿದ್ದಾರೆ. ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕರಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ, ಇದೀಗ ಅವರಿಗೆ ರಾಜಕೀಯ ಕ್ಷೇತ್ರದಲ್ಲೂ ಅವಕಾಶ ನೀಡುವ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಶೇಷವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರದಿಂದ ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ವಿಚಾರ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಡಿಕೆಶಿ ಭೇಟಿಗೆ ಹೊಸ ಅರ್ಥ?

ರವಿಚಂದ್ರನ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಬಾಲ್ಯದ ಗೆಳೆಯನನ್ನು ಭೇಟಿಯಾದ ಸಂತಸವನ್ನು ಡಿಕೆ ಶಿವಕುಮಾರ್ ಹಂಚಿಕೊಂಡಿದ್ದರೂ, ಭೇಟಿಯ ರಾಜಕೀಯ ಆಯಾಮದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸದ್ಯಕ್ಕೆ ಹೊರಬಿದ್ದಿಲ್ಲ.

ಆದರೆ ರವಿಚಂದ್ರನ್ ಅವರನ್ನು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಕರೆತರುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ಅಧಿಕೃತಗೊಂಡರೆ, ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಪ್ರವೇಶಿಸುವ ಮತ್ತೊಬ್ಬ ಪ್ರಮುಖ ವ್ಯಕ್ತಿಯಾಗಿ ರವಿಚಂದ್ರನ್ ಗುರುತಿಸಿಕೊಳ್ಳಲಿದ್ದಾರೆ.

ಅಧಿಕೃತ ಘೋಷಣೆಗಾಗಿ ಕಾಯುವಿಕೆ

ರವಿಚಂದ್ರನ್ ಅವರ ರಾಜಕೀಯ ಪ್ರವೇಶದ ವಿಚಾರ ಸದ್ಯಕ್ಕೆ ಚರ್ಚೆ ಹಾಗೂ ನಿರೀಕ್ಷೆಯ ಹಂತದಲ್ಲಿದೆ. ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬಂದ ಬಳಿಕವಷ್ಟೇ ಈ ಬೆಳವಣಿಗೆಗೆ ಸ್ಪಷ್ಟತೆ ಸಿಗಲಿದೆ.

ಚಿತ್ರರಂಗದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ರವಿಚಂದ್ರನ್ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರೆ, ಅದು ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ರಾಜಕೀಯ ಎರಡರಲ್ಲೂ ಗಮನಾರ್ಹ ಬೆಳವಣಿಗೆಯಾಗಲಿದೆ. ಹೀಗಾಗಿ ಡಿಕೆ ಶಿವಕುಮಾರ್-ರವಿಚಂದ್ರನ್ ಭೇಟಿ ಇದೀಗ ಕುತೂಹಲದ ಕೇಂದ್ರಬಿಂದುವಾಗಿದೆ.

Continue Reading

ದಿನದ ಸುದ್ದಿ

ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!

Published

on

ಅಪಘಾತ ತಡೆಗೆ ಪೊಲೀಸರ ಕಠಿಣ ಕ್ರಮ; ಅರಿವು ಕಾರ್ಯಕ್ರಮ, ಸಾಮಾಜಿಕ ಜಾಲತಾಣಗಳ ಮೂಲಕವೂ ಜಾಗೃತಿ

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ ಕಡಿವಾಣ ಬೀಳುತ್ತಿಲ್ಲ. ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸುವಿಕೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದಾರೆ.

http://Visit : www.suddidina.com

ಕಳೆದ ನಾಲ್ಕು ವರ್ಷಗಳ ಅಂಕಿ-ಅಂಶ ಗಮನಿಸಿದರೆ ರಾಜ್ಯದಲ್ಲಿ ಒಟ್ಟು 5.67 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಬರೋಬ್ಬರಿ ₹2,361.75 ಕೋಟಿ ದಂಡ ಸಂಗ್ರಹಿಸಲಾಗಿದೆ. ಈ ಅಂಕಿ-ಅಂಶಗಳು ರಾಜ್ಯದ ರಸ್ತೆಗಳಲ್ಲಿ ನಿಯಮ ಪಾಲನೆಯ ಸವಾಲು ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸುತ್ತವೆ.

2024ರಲ್ಲಿ ಗರಿಷ್ಠ ಪ್ರಕರಣಗಳ ದಾಖಲು

ವರ್ಷವಾರು ಪ್ರಕರಣಗಳನ್ನು ಗಮನಿಸಿದರೆ, 2023ರಲ್ಲಿ 1.27 ಕೋಟಿ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1.61 ಕೋಟಿಗೆ ಏರಿಕೆಯಾಗಿದೆ. 2025ರಲ್ಲಿ 1.60 ಕೋಟಿ ಪ್ರಕರಣಗಳು ದಾಖಲಾಗಿವೆ. 2026ರಲ್ಲಿ ಇದುವರೆಗೆ 1.17 ಕೋಟಿ ಪ್ರಕರಣಗಳು ದಾಖಲಾಗಿವೆ.

ದಂಡ ಸಂಗ್ರಹದಲ್ಲೂ ವರ್ಷದಿಂದ ವರ್ಷಕ್ಕೆ ದೊಡ್ಡ ಮೊತ್ತ ದಾಖಲಾಗಿದೆ. 2023ರಲ್ಲಿ ₹684.76 ಕೋಟಿ, 2024ರಲ್ಲಿ ₹915.95 ಕೋಟಿ ದಂಡ ಸಂಗ್ರಹವಾಗಿದೆ. 2025 ಮತ್ತು 2026ರ ಅಂಕಿ-ಅಂಶಗಳಲ್ಲೂ ಗಮನಾರ್ಹ ಮೊತ್ತ ದಾಖಲಾಗಿದೆ.

ನಿಯಮ ಉಲ್ಲಂಘನೆಗೆ ಕಠಿಣ ಕಾನೂನು ಕ್ರಮ

ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಅಧಿನಿಯಮದ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾಗದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇದರ ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು, ಕೆಎಸ್‌ಆರ್‌ಟಿಸಿ, ಖಾಸಗಿ ಹಾಗೂ ಶಾಲಾ ಬಸ್ ಚಾಲಕರು ಸೇರಿದಂತೆ ವಿವಿಧ ವರ್ಗದ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣವೂ ಜಾಗೃತಿಯ ವೇದಿಕೆ

ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಮೂಲಕವೂ ಸಂಚಾರ ನಿಯಮ ಪಾಲನೆಯ ಮಹತ್ವವನ್ನು ಜನರಿಗೆ ತಲುಪಿಸಲಾಗುತ್ತಿದೆ. ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳ ಕುರಿತು ಪೋಸ್ಟರ್‌ಗಳು ಹಾಗೂ ಜಾಗೃತಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ದಂಡದ ಹಣ ಎಲ್ಲಿ ಹೋಗುತ್ತದೆ?

ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗುವ ದಂಡದ ಮೊತ್ತ ಸರ್ಕಾರದ ಸಂಬಂಧಿತ ಲೆಕ್ಕ ಶೀರ್ಷಿಕೆಗೆ ಜಮೆಯಾಗುತ್ತದೆ. ಸಂಚಾರ ಪೊಲೀಸ್ ವಿಭಾಗಕ್ಕೆ ಈ ಹಣವನ್ನು ಸ್ವತಂತ್ರವಾಗಿ ಬಳಸುವ ಅಧಿಕಾರವಿಲ್ಲ. ಸರ್ಕಾರದ ಆದೇಶದಂತೆ ಸಂಗ್ರಹವಾಗುವ ದಂಡದ ಶೇ.50ರಷ್ಟು ಅನುದಾನವನ್ನು ರಸ್ತೆ ಸುರಕ್ಷತಾ ಕಾರ್ಯಗಳಿಗೆ ಬಳಸಲಾಗುತ್ತಿದೆ.

Continue Reading
Advertisement

Title

ದಿನದ ಸುದ್ದಿ11 hours ago

ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!

ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ...

bengaluru-koodlugate-snn-raj-eternia-18-floor-building-demolition bengaluru-koodlugate-snn-raj-eternia-18-floor-building-demolition
ದಿನದ ಸುದ್ದಿ11 hours ago

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ...

kalaburagi-municipal-corporation-mayor-deputy-mayor-election-congress-win kalaburagi-municipal-corporation-mayor-deputy-mayor-election-congress-win
ದಿನದ ಸುದ್ದಿ11 hours ago

ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್...

ravichandran-political-entry-dk-shivakumar-mlc-nomination ravichandran-political-entry-dk-shivakumar-mlc-nomination
ದಿನದ ಸುದ್ದಿ11 hours ago

ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!

ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಹೆಚ್ಚಿದ ಕುತೂಹಲ; ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್...

ದಿನದ ಸುದ್ದಿ11 hours ago

ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ...

janardhana-reddy-attacks-b-nagendra-valmiki-scam-ballari-political-war janardhana-reddy-attacks-b-nagendra-valmiki-scam-ballari-political-war
ದಿನದ ಸುದ್ದಿ11 hours ago

ವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!

ಸುದ್ದಿದಿನ, ಬಳ್ಳಾರಿ: ಬಳ್ಳಾರಿಯಲ್ಲಿ ರಾಜಕೀಯ ವಾಕ್ಸಮರ ಮತ್ತೊಮ್ಮೆ ತೀವ್ರಗೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಮಾಜಿ...

bengaluru-strr-ring-road-traffic-relief-40-percent-reduction bengaluru-strr-ring-road-traffic-relief-40-percent-reduction
ದಿನದ ಸುದ್ದಿ15 hours ago

ಬೆಂಗಳೂರಿನ ಟ್ರಾಫಿಕ್‌ಗೆ ಬಿಗ್ ರಿಲೀಫ್‌! ವರ್ಷಾಂತ್ಯಕ್ಕೆ STRR ಸಂಚಾರ ಮುಕ್ತ: ನಗರ ದಟ್ಟಣೆ ಶೇ.40ರಷ್ಟು ಇಳಿಕೆ ನಿರೀಕ್ಷೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವಂತೆ ವಾಹನ ದಟ್ಟಣೆಯ ಸಮಸ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಹೊರರಾಜ್ಯಗಳಿಂದ ನಗರವನ್ನು ದಾಟಿ ಸಾಗುವ ಭಾರಿ ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದ...

toxic-movie-kichcha-sudeepa-supports-yash-negative-reviews toxic-movie-kichcha-sudeepa-supports-yash-negative-reviews
ದಿನದ ಸುದ್ದಿ15 hours ago

ವಿಭಿನ್ನ ಪ್ರಯೋಗಕ್ಕೆ ಸುದೀಪ್‌ ಫಿದಾ; ‘ಟಾಕ್ಸಿಕ್’ ವಿರುದ್ಧದ ಟೀಕೆಗಳ ನಡುವೆ ಯಶ್‌ಗೆ ಭರ್ಜರಿ ಬೆಂಬಲ

ಸುದ್ದಿದಿನ,ಸಿನಿಮಾ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಯಾದ ಬಳಿಕ ನಿರೀಕ್ಷೆಗಿಂತ ಹೆಚ್ಚಾಗಿ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು...

ದಿನದ ಸುದ್ದಿ15 hours ago

ಶನಿವಾರ ಕಲಬುರಗಿ ಪಾಲಿಕೆಯ ಹೊಸ ಮೇಯರ್‌, ಉಪ ಮೇಯರ್‌ ಆಯ್ಕೆ: ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ?

ಸುದ್ದಿದಿನ, ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಮೇಯರ್‌ ಸ್ಥಾನವನ್ನು ಬಿಸಿಎ ವರ್ಗಕ್ಕೆ...

ದಿನದ ಸುದ್ದಿ15 hours ago

ಹೆದ್ದಾರಿಯಲ್ಲಿ ಹಾಲಿನ ಹೊಳೆ! ಪಲ್ಟಿಯಾದ ನಂದಿನಿ ಟ್ಯಾಂಕರ್‌ನಿಂದ 21 ಸಾವಿರ ಲೀಟರ್ ಹಾಲು ರಸ್ತೆಗೆ

ತುಮಕೂರು: ಸಾಮಾನ್ಯವಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ಹರಿಯುವುದನ್ನು ನೋಡುತ್ತೇವೆ. ಆದರೆ ತುಮಕೂರಿನ ಶಿರಾ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದ ಘಟನೆ ಮಾತ್ರ ವಿಭಿನ್ನ. ಇಲ್ಲಿ ನೀರಿನ ಬದಲು...

Trending