ದಿನದ ಸುದ್ದಿ

ಕೊಡಗು ಸಂತ್ರಸ್ತರಿಗೆ ಸಂಸದರ ನಿಧಿಯಿಂದ 1ಕೋಟಿ ರೂ : ನಿರ್ಮಲ ಸೀತಾರಾಮನ್

Published

on

ಸುದ್ದಿದಿನ ಡೆಸ್ಕ್ : ಕೊಡಗಿಗೆ ಇಂದು ಭೇಟಿ ನೀಡಿದ ಕೇಂದ್ರ ರಕ್ಷಣಾ ಸಚಿವೆ ಸೀತಾರಾಮನ್, ಸಂಸದರ ನಿಧಿಯಿಂದ ಕೊಡಗು ಸಂತ್ರಸ್ತರಿಗೆ 1ಕೋಟಿ ರೂ ಅನುದಾನ ನೀಡಲಾಗುವುದು ಎಂದರು.

ಕೊಡಗಿನ ಪ್ರವಾಹದ ಪರಿಣಾಮದ ಕುರಿತು ಪ್ರಧಾನಿಯವರಿಗೆ ಮಾಹಿತಿ ನೀಡಿ ಅವರ ಗಮನಕ್ಕೆ ತರಲಾಗುವುದು. ಹಾಗೂ ಕೇಂದ್ರವು
ಕೊಡಗಿಗೆ ಎಲ್ಲಾ‌ ರೀತಿಯ ನೆರವನ್ನು ನೀಡಲು ನಿರ್ಧರಿಸಿದೆ ಎಂದರು.

ಈಗ ಕೊಡಗು ಹಾಗೂ ಕೇರಳಕ್ಕೆ ನೀಡಿರುವ ಅನುದಾನವು ಅಲ್ಲಿನ ತುರ್ತುಪರಿಸ್ಥಿತಿಗೆ ಅನುಕೂಲವಾಗಲೆಂದಯ ನೀಡಿದೆ. ನಂತರ ಕೇಂದ್ರದ ತಂಡವು ಅಧ್ಯಯನ ನಡೆಸಿ ಪೂರ್ಣ ಪ್ರಮಾಣದ ಪರಿಹಾರದ ಮೊತ್ತವನ್ನು ನೀಡುವುದು ಎಂದು ತಿಳಿಸಿದರು.

ಸುದ್ದಿದಿನ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version