ದಿನದ ಸುದ್ದಿ
ರುಜುವಾನ್ ಕೆ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ದಾವಣಗೆರೆ:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು, ಕುಲಸಚಿವರು (ಮೌಲ್ಯಮಾಪನ) ಆದ ಡಾ. ಹೆಚ್. ವಿಶ್ವನಾಥ್ ರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರದರ್ಶನಾತ್ಮಕ ಕಲೆಗಳು : ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯ ಕುರಿತು ರುಜುವಾನ್ ಕೆ. ಅವರು ಸಿದ್ಧಪಡಿಸಿದ ಸಂಶೋಧನಾ ಮಹಾಪ್ರಾಬಂಧವನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಪಿಎಚ್.ಡಿ. ಪದವಿ ನೀಡಿದೆ.
ಈ ಸಭೆಯಲ್ಲಿ ಸ್ನಾತಕೋತ್ತರ ಪರೀಕ್ಷಾ ಮಂಡಳಿಯ ಅಧ್ಯಕ್ಷರಾದ ಪ್ರೊ. ಜೋಗಿನಕಟ್ಟೆ ಮಂಜುನಾಥ್, ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷರಾದ ಡಾ. ಜಯರಾಮಯ್ಯ ವಿ. ಹಾಗೂ ಕನ್ನಡ ಅಧ್ಯಯನ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಇತರೆ ವಿಭಾಗದ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಗೆಯೇ ಕನ್ನಡ ಅಧ್ಯಯನ ವಿಭಾಗದ ಸ್ನಾತಕ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಅಂದನೂರು ಗ್ರಾಮದ ಖಲಂದರ್ ಸಾಬ್, ಶಂಶಾದ್ ಭೀ ಅವರ ಪುತ್ರ ರುಜುವಾನ್ ಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243