ದಿನದ ಸುದ್ದಿ

ಶಬರಿ ಮಲೈ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ; ಸುಪ್ರೀಂ ಕೋರ್ಟ್ ತೀರ್ಪು

Published

on

ಸುದ್ದಿದಿನ ದೆಹಲಿ: ಶಬರಿ ಮಲೈ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರ ಪ್ರವೇಶ ವಿಚಾರ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತಐತಿಹಾಸಿಕ ತೀರ್ಪು ಪ್ರಕಟಿಸಲಿದೆ. ದಶಕಗಳ ವಿವಾದಿತ ದೇಗುಲ ಪ್ರವೇಶ ವಿಚಾರ ಅಂತ್ಯಗೊಳ್ಳಲಿದೆ. ಸುಪ್ರೀಂ ಕೋರ್ಟ್ ಈಚಗಷ್ಟೇ ಕೆಲವು ಮಹತ್ತರದ ತೀರ್ಪು ನೀಡಿದ್ದು, ಮಹಿಳೆಯರು ತಮ್ಮ ತೀರ್ಪು ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

೧೦ರಿಂದ ೫೦ ವರ್ಷ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪ ದೇಗುಲದಲ್ಲಿ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಇದನ್ನು ಖಂಡಿಸಿ ಮತ್ತು ದೇಗುಲದಲ್ಲಿ ಪ್ರವೇಶ ನೀಡುವಂತೆ ಯಂಗ ಲಾಯರ್ಸ್ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು. ನಟಿ ಜಯಮಾಲಾ ಕೂಡ ೨೦೦೬ರಲ್ಲಿ ಅರ್ಜಿ ಸಲ್ಲಿಸಿದ್ದರು. ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪ್ರವೇಶ ಕುರಿತು ಕನ್ನಡದ ನಟಿ ಜಯಮಾಲಾ ಮೊದಲ ಬಾರಿಗೆ ದ್ವನಿ ಎತ್ತಿದ್ದರು.

ಸುಪ್ರೀಂ ಕೋರ್ಟ್ ಪ್ರವೇಶ ನಿರಾಕರಣೆ ಪರ ತೀರ್ಪು ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ದಶಕ ವಿವಾದಿತ ಶಬರಿಮಲೈ ದೇಗುಲದಲ್ಲಿ ಮಹಿಳೆಯರ ಪ್ರವೇಶ ವಿಚಾರ ಅಂತ್ಯಗೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿ ಪೀಠ ತೀರ್ಪು ನೀಡಲಿದೆ.

ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮಹಿಳೆಯರ ಮೇಲಿನ ಸಮಾಜದ ದೃಷ್ಟಿಕೋನ ಬದಲಾಗಬೇಕು ಎಂದು ಹೇಳಿದ್ದಾರೆ.

Trending

Exit mobile version