ದಿನದ ಸುದ್ದಿ
ಶಬರಿಮಲೈ ದೇಗುಲದಲ್ಲಿ ಮಹಿಳಾ ಪ್ರವೇಶ ಪ್ರಕರಣ; ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿದೆ
ಸುದ್ದಿದಿನ ದೆಹಲಿ: ಶಬರಿಮಲೈ ದೇಗುಲದ ೮೦೦ ವರ್ಷಗಳ ಆಚರಣೆಗೆ ಬ್ರೇಕ್ ಹಾಕಿರುವ ಸುಪ್ರೀಂ ಕೋರ್ಟ್, ಮಹಿಳೆಯರು ಪುರುಷರ ಸಮಾನ ಎಂದು ಸುಪ್ರೀಂ ಕೋಟ್ ಐವರು ನೇತೃತ್ವದ ಪೀಠ ತೀರ್ಪು ನೀಡಿದೆ. ಅಯ್ಯಪ್ಪ ಸ್ವಾಮಿ ಭಕ್ತರು ಬೇರೆ ಧರ್ಮದವರಲ್ಲ. ಮಹಿಳೆಯರನ್ನು ನಿಷೇಧಿಸುವ ಅಗತ್ಯ ಯಾವ ಧರ್ಮಕ್ಕೂ ಇಲ್ಲ ಎಂದು ಸುಪ್ರೀಂ ಐತೀರ್ಪು ನೀಡಿದೆ.
ಇದನ್ನು ಓದಿ; ಶಬರಿ ಮಲೈ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ; ಸುಪ್ರೀಂ ಕೋರ್ಟ್ ತೀರ್ಪು
ಶಬರಿಮಲೈ ದೇವಸ್ತಾನ ತಾರತಮ್ಯ ರೂಢಿಮಾಡಿಕೊಂಡಿದೆ. ಮಹಿಳೆಯರ ಬಹಿಷ್ಕಾರ ಸರಿಯಲ್ಲ. ಮಹಿಳೆಯರು ಸಮಾಜದಲ್ಲಿ ತಾರತಮ್ಯ ಒಳಗಾಗುತ್ತಿದ್ದಾರೆ. ಮಹಿಳೆಯರನ್ನು ಸಮಾನವಾಗಿ ಪರಿಗಣಿಸಿ ಅವರ ಮೇಲಿನ ದೃಷ್ಟಿಕೋನ ಬದಲಾಗಬೇಕು. ತಾರತಮ್ಯ ನಿವಾರಣೆ ಕಾನೂನು ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ತೀರ್ಪು ನೀಡಿದೆ.
ಶಬರಿಮಲೈ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ತೀರ್ಪು ನೀಡಿರುವುದು ಸಂತೋಷ ತಂದಿದೆ. ಇದು ಹೆಣ್ಣು, ಹೆಣ್ಣಿನ ಸಂಕುಲಕ್ಕೆ ಸಿಕ್ಕ ಜಯ ಎಂದು ನಟಿ ಜಯಮಾಲಾ ತಿಳಿಸಿದ್ದಾರೆ.