ಲೈಫ್ ಸ್ಟೈಲ್
ರೆಸಿಪಿ | ರುಚಿ ರುಚಿಯಾದ ‘ಸಾಬೂದಾನ ವಡ’
- ಶಶಿಕಲಾ ಸುನೀಲ್, ಗಾಯಕಿ, ಬೆಂಗಳೂರು
ಬೇಕಾಗುವ ಸಾಮಗ್ರಿಗಳು
- ಸಾಬೂದಾನ – 1 ಕಪ್
- ಆಲೂಗಡ್ಡೆ – 1
- ಹಸಿಮೆಣಸಿನಕಾಯಿ – 3
- ಶುಂಠಿ – 2 ಇಂಚು
- ಕಡಲೆಕಾಯಿಬೀಜ – 1 ಸ್ಪೂನ್
- ಜೀರಿಗೆ – ಅರ್ಧ ಸ್ಪೂನ್
- ಕೊತ್ತಂಬರಿ ಸೊಪ್ಪು – 1 ಸ್ಪೂನ್
- ಉಪ್ಪು ರುಚಿಗೆ
- ಎಣ್ಣೆ – ಕರಿಯಲು
ಮಾಡುವ ವಿಧಾನ
ಸಾಬೂದಾನವನ್ನು 3 – 4 ಬಾರಿ ತೊಳೆದು 4 ಗಂಟೆ ನೆನಸಿ. ಆಲೂಗಡ್ಡೆಯನ್ನು cooker ನಲ್ಲಿ 4 whishel ಕೂಗಿಸಿ. ಈಗ ನೆನಸಿದ ಸಾಬೂದಾನ, ಆಲೂಗಡ್ಡೆ ಹಾಕಿ ಸ್ವಲ್ಪ ಮ್ಯಾಷ್ ಮಾಡಿ ಕಲಸಿ. ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಹಾಗೂ ಶುಂಠಿ, ಜೀರಿಗೆ, ಕೊತ್ತಂಬರಿಸೊಪ್ಪು,ಕಡಲೆಕಾಯಿ ಬೀಜ ಸ್ವಲ್ಪವೇ ಹುರಿದು ಸ್ವಲ್ಪ ಕುಟ್ಟಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ವಡೆ ಆಕಾರಕ್ಕೆ ಕಾದ ಎಣ್ಣೆಯಲ್ಲಿ ಕರಿದು ಸವಿಯಿರಿ. (ನೀರಿನ್ನು ಎಲ್ಲಿಯೂ ಸೇರಿಸಿಲ್ಲ) Shallow fry ಕೂಡ ಮಾಡಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243