ದಿನದ ಸುದ್ದಿ

ಸರಿಗಮಪ ಸೀಸನ್ 15 | 2ನೇ ಸ್ಥಾನ ಖುಷಿ ತಂದಿದೆ ಎಂದ್ರು ಹನುಮಂತ

Published

on

ಸುದ್ದಿದಿನ, ಬೆಂಗಳೂರು : ಕನ್ನಡದ ಜನಪ್ರಿಯ ವಾಹಿನಿ ಝೀ ಟಿವಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 15’ ರ ಪೈನಲ್ಸ್ ನ ತೀರ್ಪು ಶನಿವಾರ ಹೊರಬಿದ್ದಿದೆ.

ಶಾಸ್ತ್ರೀಯ ಸಂಗೀತದ ಪ್ರತಿಭೆ ಕೀರ್ತನ್ ಹೊಳ್ಳ ಅವರು ಸೀಸನ್ 15 ರ ವಿನ್ನರ್ ಆಗಿದ್ದಾರೆ. ಇವರಿಗೆ ಝೀವಾಹಿನಿಯ ಪರವಾಗಿ ಕಾನ್ಫಿಡೆಂಟ್ ಗ್ರೂಪ್ ನವರು 35 ಲಕ್ಷ ರೂ ಮೌಲ್ಯದ ಫ್ಲಾಟ್ ಬಹುಮಾನವಾಗಿ ನೀಡಿದ್ದಾರೆ.

ಸೀಸನ್ 15 ರ ಹನುಮಂತ ಇವರು ಹಾವೇರಿ ಜಿಲ್ಲೆಯ ಕುರಿಗಾಹಿ, ಇವರು ಹನುಮಂತಣ್ಣ ಎಂದೇ ಶೋನಲ್ಲಿ ಫೇಮಸ್ ಆಗಿದ್ದರು. ಟೆಕ್ ನಕ್ ಹನುಮಂತಣ್ಣ ಎಂತಲೂ ಫೇಮಸ್ ಆಗಿದ್ದರು ಹನುಮಂತ. ಇವರು ಸರಿಗಮಪ ಸೀಸನ್ 15 ರ ರನ್ನರ್ ಅಪ್ ಆಗಿ ಎರಡನೇ ಸ್ಥಾನದಲ್ಲಿ ಹೊರ ಹೊಮ್ಮಿದ್ದಾರೆ. ” ಇದು ನನಗೆ ತುಂಬಾ ಖುಷಿ ತಂದಿದೆ ಎಂದು ಹನುಮಂತ ಹೇಳಿದ್ದಾರೆ.‌ಸಾಧ್ವಿನಿ ಯವರು ಈ‌ ಶೋದ ಪೈನಲಿಸ್ಟ್ ಆಗಿದ್ದು ಇವರು ಮೂರನೇ ಸ್ಥಾನ ಲಭಿಸಿದೆ. ಸಾದ್ವಿಗೆ 2ಲಕ್ಷ ರೂ ಬಹುಮಾನವಾಗಿ ದೊರೆತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version