ದಿನದ ಸುದ್ದಿ

ಕೋಗಲೂರು| ಸರ್ಕಾರ ಆದೇಶದಂತೆ ಶಾಲೆ ಓಪನ್ : ಇಸಿಒ ಕುಬೇರಪ್ಪ 

Published

on

ಸುದ್ದಿದಿನ,ಚನ್ನಗಿರಿ : ಶಾಲೆ ಪುನಾರಾರಂಭಕ್ಕೆ ಸಂಬಂದಿಸಿದಂತೆ ಪೋಷಕರು ಹಾಗೂ  ‌ಎಸ್ಡಿಎಂಸಿಯವರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಶಾಲೆಗಳ ಆರಂಭದ ಬಗ್ಗೆ ಸರಕಾರ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ‌ ಪೋಷಕರ ನಿರ್ಧಾರದ ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆ ಶಿಕ್ಷಕರಿಗಿಂತ  ಹೆಚ್ಚಿನ ಜವಾಬ್ದಾರಿಯ ಪಾತ್ರ ವಹಿಸಬೇಕಾಗುತ್ತದೆ ಎಂದು  ಇ ಸಿ ಓ ಕುಬೇರಪ್ಪ ತಿಳಿಸಿದರು.

ತಾಲೂಕಿನ ಕೋಗಲೂರು ಗ್ರಾಮದ ಮಾನಸ ಕಾನ್ವೆಂಟ್ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು .

ಮಹಾಮಾರಿ ಕೊರೋನ ರೋಗವು‌ ವಿಶ್ವದಲ್ಲೆಡೆ ನೆಲೆ ನಿಂತಿದೆ , ಪೋಷಕರುಗಳ ಅಭಿಪ್ರಾಯವನ್ನು ಸಂಗ್ರಹಿಸಿ ಶಾಲೆಗಳ ಪುನರಾರಂಬಿಸುವುದು. ಖಾಸಗಿ ಶಾಲೆಯ‌‌ ಆಡಳಿತಧಿಕಾರಿಗಳು  ಪೋಷಕರ ಹಾಗೂ , ಎಸ್‌ಡಿಎಂಸಿ ಸಭೆಯನ್ನು ನಡೆಸುವುದು ರಾಜ್ಯದಲ್ಲಿ ಕೋವಿಡ್ ವೈರಸ್ಸ್ ತಾಂಡವಾಟುತಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸ ಬೇಕು ಎಂದರು.

ಶಾಲೆಗೆ ಮಕ್ಕಳು ಬರುತಿದ್ದಂತೆ ಸ್ಯಾನಿಟೈಸರ್ ಮಾಡಿಸುವುದು ಹಾಗೂ ‌ಶೌಚಾಲಯ ತರಗತಿ ಕೊಠಡಿಗಳಿಗೆ  ಸ್ಯಾನಿಟೈಸ್ ಮಾಡಿಸುವುದು ಮಕ್ಕಳಾ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವುದು ಮಕ್ಕಳು ಆಟವಾಡಲು ಮೈದಾನಕ್ಕೂ ಬರುವಂತಿಲ್ಲಾ ಮತ್ತು ಶಿಕ್ಷಕರಿಗಿಂತ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಶಾಲೆಗಳಲ್ಲಿ ಸರಕಾರ ನಿಯಮದಂತೆ ಇಲ್ಲೂ ಸಹ ಅಗತ್ಯ ಕ್ರಮವನ್ನು ವಹಿಸುತ್ತಾರೆ ಸರಕಾರದ ಆದೇಶದಂತೆ ಶಾಲೆಗಳು ಮಾತ್ರ ಆರಂಭಿಸುವುದು ಎಂದು ಸೂಚಿಸಿದರು.

ಸಿ ಆರ್ ಪಿ , ಸಿಆರ್ , ತಿಮ್ಮೇಶ್, ಆಡಳಿತಾಧಿಕಾರಿ  ಬಸವನಗೌಡ್ರು ‌ ಎಸ್ಡಿಎಂಸಿ ಅಧ್ಯಕ್ಷರಾದ ಹೆಚ್ ಆರ್ ವೀರಭದ್ರಪ್ಪ , ಕೆ ಆರ್ ಲೋಕೇಶ್ , ಸೇರಿದಂತೆ ಶಿಕ್ಷಕರು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version