ದಿನದ ಸುದ್ದಿ

ಸ್ಯಾನಿಟೈಸರ್ ಸೇವಿಸಿ ಏಳು ಮಂದಿ ಸಾವು

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಮುಂಬೈ: ಎಣ್ಣೆ (ಮದ್ಯ) ಸಿಗದ ಕಾರಣ ಸ್ಯಾನಿಟೈಸರ್ ಕುಡಿದು ಏಳು ಜನರು ಸಾವನ್ನಪ್ಪಿರುವಂತಹ ಎರಡು ಪ್ರತ್ಯೇಕ ಘಟನೆಗಳು ಮಹಾರಾಷ್ಟ್ರದ ಯವತಮಲ್ ಜಿಲ್ಲೆಯಲ್ಲಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಏಳು ಜನರೂ ಸಾವನ್ನಪ್ಪಿದ್ದಾರೆ.

ತೆಲಿ ಫೀಲ್ ವ್ಯಾಪ್ತಿಯ ದತ್ತಾ ಲಾಂಜೇವಾರ್ ಮತ್ತು ನೂತನ್ ಎಂಬುವವರು ಸ್ಯಾನಿಟೈಸರ್ ಕುಡಿದು ಮನೆಗೆ ತೆರಳಿದ್ದರು. ರಾತ್ರಿ ಇಬ್ಬರಿಗೂ ತಲೆನೋವು ಹೆಚ್ಚಾದ ಕಾರಣ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ ಕೆಲ ಸಮಯದ ನಂತರ ಇಬ್ಬರೂ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ | ಕೊರೋನಾ ತಂದಿಟ್ಟ ಸಂಕಷ್ಟ

ಆಯತ್ ನಗರದಲ್ಲಿ ಸಂತೋಷ್ ಮೆಹ್ರಾ, ಗಣೇಶ್ ನಾಂದೇಕರ್, ಗಣೇಶ್ ಶೆಲಾರ್ ಮತ್ತು ಸುನಿಲ್ ಡೆಂಗಲೆ ಎಂಬುವವರು ಸಹ ಸ್ಯಾನಿಟೈಸರ್ ಕುಡಿದಿದ್ದರಿಂದ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಘೋಷಣೆಯ ಪರಿಣಾಮ ಮದ್ಯದಂಗಡಿಗಳು ಬಂದ್ ಆಗಿವೆ. ಮದ್ಯಪಾನ ಪ್ರಿಯರು ಅಂಗಡಿಗಳತ್ತ ಹೆಜ್ಜೆ ಹಾಕಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಈ ಕಾರಣವೇ ಸ್ಯಾನಿಟೈಸರ್ ಸೇವನೆಗೆ ಕಾರಣವಾಗಿರ ಬಹುದೆಂದು ಶಂಕಿಸಲಾಗಿದೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version