ದಿನದ ಸುದ್ದಿ

ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರಿಗೆ ಬಸವ ಭಾರತಿ ಸಾಹಿತ್ಯ ಸಿರಿ ಕಾವ್ಯ ಪುರಸ್ಕಾರ

Published

on

ಸುದ್ದಿದಿನ, ದಾವಣಗೆರೆ : ಜಿಲ್ಲೆಯ ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್. ಅವರ ‘ಮಲೆನಾಡ ಮಧುಬಾಲೆ‘ ಎಂಬ ಕವನ ಸಂಕಲನದ ಹಸ್ತಪ್ರತಿಗೆ ಕಲಬುರಗಿಯ ಬಸವ ಭಾರತಿ ಸಾಹಿತ್ಯ ಬಳಗವು 2022ರ ‘ಬಸವ ಭಾರತಿ ಸಾಹಿತ್ಯ ಸಿರಿ ಕಾವ್ಯ ಪುರಸ್ಕಾರ’ ಪ್ರಶಸ್ತಿ ನೀಡಿದೆ.

ಕಳೆದ ನವೆಂಬರನಲ್ಲಿ “ಬಸವ ಭಾರತಿ ಸಾಹಿತ್ಯ ಸಿರಿ ಕಾವ್ಯ ಪುರಸ್ಕಾರ” ಕ್ಕೆ ಕಾವ್ಯದ ಹಸ್ತಪ್ರತಿಗಳನ್ನು ಅಹ್ವಾನಿಸಿದ್ದು ಒಟ್ಟು 48 ಹಸ್ತಪ್ರತಿಗಳು ಬಂದಿದ್ದವು. ಇವುಗಳಲ್ಲಿ 8 ಹಸ್ತಪ್ರತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ಪ್ರಶಸ್ತಿಯು 5000 ರೂಪಾಯಿಗಳ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ಈ ಪ್ರಶಸ್ತಿ ಪ್ರಧಾನ ಸಮಾರಂಭವು 2023 ರ ಜೂನ್ ತಿಂಗಳಲ್ಲಿ ನಡೆಯುವ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಸಂಸ್ಥೆಯ ರಾಜ್ಯ ಸಂಚಾಲಕರಾದ ಡಾ. ನಾನಾಸಾಹೇಬ ಹಚ್ಚಡದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version