ದಿನದ ಸುದ್ದಿ
ಮೀನುಗಾರಿಕೆ ಇಲಾಖೆಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ಶಿವಮೊಗ್ಗ : ಜಿಲ್ಲೆಯ ಮೀನುಗಾರಿಕೆ ಇಲಾಖೆಯಿಂದ 2019 ಹಾಗೂ 20ನೇ ಸಾಲಿನಲ್ಲಿ ಮೀನುಗಾರರಿಗೆ ನೀಡಲಾಗುವ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪೊಪೆಡ್ ಖರೀದಿ, ಮೀನುಗಾರರ ಸಹಕಾರ ಸಂಘಗಳಲ್ಲಿ ನೋಂದಾಯಿಸಿದ ಗುಂಪಿಗೆ ತ್ರಿಚಕ್ರ ಅಥವಾ ನಾಲ್ಕು ಚಕ್ರದ ವಾಹನ ಖರೀದಿ, ಮೀನುಗಾರಿಕೆ ಸಲಕರಣೆ ಕಿಟ್ ಖರೀದಿ, ಪೈಬರ್ ಗ್ಲಾಸ್ ಹರಿಗೋಲು ಖರೀದಿ, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರ, ಜಲ ಕೃಷಿ ಫಾರಂ ನೋಂದಣಿ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪುಯೋಜನೆಯಡಿಯಲ್ಲಿ ಮೀನು ಮಾರುಕಟ್ಟೆ ಮತ್ತು ಸಂಚಾರಿ ಮೀನು ಮಾರಾಟಕ್ಕೆ ಅನುಕೂಲವಾಗುವಂತೆ, ನಿರ್ವಸಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ಮತ್ತು ಮೀನು ಕೃಷಿಕರಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡಲಾಗುತ್ತಿದೆ.
ಜಿಲ್ಲೆಯ ಮೀನುಗಾರರು ಹಾಗೂ ಮೀನುಗಾರಿಕೆ ಕೃಷಿಯಲ್ಲಿ ತೊಡಗಿರುವ ಕೃಷಿಕರು ಇಂದಿನಿಂದ 30 ದಿನಗಳೊಳಗಾಗಿ ತಾಲ್ಲೂಕು ಮೀನುಗಾರಿಕೆ ನಿರ್ದೇಶಕರ ಕಛೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಲು ಸೂಚಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243