ದಿನದ ಸುದ್ದಿ
ಶಿವಮೊಗ್ಗ | ಅನಾಥ ಹಸುವಿಗೆ ಶಸ್ತ್ರಚಿಕಿತ್ಸೆ ನೀಡಿದ ಪಶುವೈದ್ಯರು
ಸುದ್ದಿದಿನ,ಶಿವಮೊಗ್ಗ : ದೇಶಾದ್ಯಂತ ಕರೋನ ಸೋಂಕಿನ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಆಗಿದ್ದರೂ ಸಹ ನಗರದ ಪಶುವೈದ್ಯರ ತಂಡವೊಂದು ಅನಾಥ ಹಸುವಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದೆ.
ನಗರದ ವಿನೋಬನಗರದಲ್ಲಿ ಹಸುವೊಂದು ಕಾಲು ಮುರಿದುಕೊಂಡು ಬಿದ್ದು ಗಾಯವು ಕೊಳೆತ ಸ್ಥಿತಿಯಲ್ಲಿರುವುದನ್ನು ನಾಗರೀಕರಿಂದ ಅರಿತ ಪಶುವೈದ್ಯರು ತಕ್ಷಣವೇ ಹಸುವನ್ನು ನಗರದ ಮಹಾವೀರ ಗೋಶಾಲೆಗೆ ಸೇರಿಸಿ ಕೊಳೆತ ಸ್ಥಿತಿಯಲ್ಲಿದ್ದ ಮುರಿದ ಕಾಲನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದ್ದಾರೆ. ಪಶು ಶಸ್ತ್ರಚಿಕಿತ್ಸಾ ತಜ್ಞರಾದ ಡಾ|| ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಪಶುಚಿಕಿತ್ಸಾಲಯ, ಮತ್ತೂರು ಹಾಗೂ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ|| ಸಿದ್ದೇಶ್, ಸಂಚಾರಿ ಪಶುಚಿಕಿತ್ಸಾಲಯ, ಶಿವಮೊಗ್ಗ ರವರು ಪಶುಸಂಗೋಪನಾ ಇಲಾಖೆಯ ಸಿಬ್ಬಂದಿಗಳ ಸಹಯೋಗದಿಂದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದಾರೆ. ಚಿಕಿತ್ಸೆಯ ನಂತರ ಹಸು ಚೇತರಿಸಿಕೊಂಡಿದೆ.
ಶಸ್ತ್ರಚಿಕಿತ್ಸೆಯ ನಂತರ ಮಾತನಾಡಿದ ಡಾ|| ಕಮಲೇಶ್ ಕುಮಾರ್ ರವರು ಮೂಕಪ್ರಾಣಿಗಳು ಅವು ಆರೋಗ್ಯವಾಗಿದ್ದಾಗ ಸಾಕುವವರು ಅವುಗಳ ಆರೋಗ್ಯ ಹದಗೆಟ್ಟಾಗ ಈ ರೀತಿ ರಸ್ತೆಯಲ್ಲಿ ಬಿಡುವುದು ಯೋಗ್ಯವಲ್ಲ. ಈ ರೀತಿಯಾದ ಹಸುಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪಶು ವೈದ್ಯರನ್ನು ಭೇಟಿ ಮಾಡಿ ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿ ಎಂದು ಹೇಳುತ್ತಾ ಕಳವಳ ವ್ಯಕ್ತಪಡಿಸಿದರು .
ಸುದ್ದಿದಿನ.ಕಾಂ|ವಾಟ್ಸಾಪ್|9980346243