ದಿನದ ಸುದ್ದಿ
ಸಾವಿನ ಸಂಭ್ರಮ ಕೊಲೆಯಷ್ಟೆ ಘೋರ ಕೃತ್ಯ : ಸಿದ್ದರಾಮಯ್ಯ ಟ್ವೀಟ್
ಸುದ್ದಿದಿನ, ಬೆಂಗಳೂರು : ಸೋಮವಾರ ವಿಧಿವಶರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಸಾವನ್ನು ಕೆಲವು ಕಿಡಿಗೇಳಿಗಳು ಸಂಭ್ರಮಿಸಿದರು. ಇವರ ಸಾವನ್ನು ಸಂಭ್ರಮಿಸಿದವರ ಮನೋವಿಕೃತತೆಯ ಕುರಿತಾಗಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ವಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ. “ಸಾವಿನ ಸಂಭ್ರಮ ಕೊಲೆಯಷ್ಟೆ ಘೋರ ಕೃತ್ಯ. ಅದು ಕಾರ್ನಾಡರದ್ದಾಗಲಿ, ಕಾಂಗ್ರೆಸಿಗನದ್ದಾಗಲಿ ಅಥವಾ
ಬಿಜೆಪಿಯವರದ್ದಾಗಲಿ. ಸೈದ್ಧಾಂತಿಕ ವಿರೋಧಕ್ಕಾಗಿ ಯಾರೂ ಸಾವು ಸಂಭ್ರಮಿಸುವಂಥ ಶತ್ರುಗಳಾಗಬಾರದು.
‘ಬಿತ್ತಿದನ್ನೇ ಫಸಲಾಗಿ ಪಡೆಯುತ್ತೇವೆ’. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ”. ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.
ಸಾವಿನ ಸಂಭ್ರಮ ಕೊಲೆಯಷ್ಟೆ ಘೋರ ಕೃತ್ಯ. ಅದು ಕಾರ್ನಾಡರದ್ದಾಗಲಿ, ಕಾಂಗ್ರೆಸಿಗನದ್ದಾಗಲಿ ಅಥವಾ ಬಿಜೆಪಿಯವರದ್ದಾಗಲಿ. ಸೈದ್ಧಾಂತಿಕ ವಿರೋಧಕ್ಕಾಗಿ ಯಾರೂ ಸಾವು ಸಂಭ್ರಮಿಸುವಂಥ ಶತ್ರುಗಳಾಗಬಾರದು.
'ಬಿತ್ತಿದನ್ನೇ ಫಸಲಾಗಿ ಪಡೆಯುತ್ತೇವೆ'. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ. pic.twitter.com/METHQva2GB
— Siddaramaiah (@siddaramaiah) June 11, 2019
ಸುದ್ದಿದಿನ.ಕಾಂ|ವಾಟ್ಸಾಪ್|9980346243