ರಾಜಕೀಯ
ಪಾಕಿಸ್ತಾನ ಕೆಣಕಿದರೆ ಎದುರುತ್ತರ ಕೊಡುವ ಸಾಮರ್ಥ್ಯ ನಮ್ಮ ಸೈನ್ಯಕ್ಕಿದೆ : ಪಾಕ್ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯ
ಸುದ್ದಿದಿನ, ವಿಜಯಪುರ : ನಮ್ಮದು ಶಾಂತಿಪ್ರಿಯ ರಾಷ್ಟ್ರ. ನಾವು ಯುದ್ಧವನ್ನು ಬಯಸುವವರಲ್ಲ. ಆದರೆ ನಮ್ಮ ಈ ಮನೋಭಾವನೆ ನಮ್ಮ ದೌರ್ಬಲ್ಯವಲ್ಲ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು.ವಿನಾಕಾರಣ ನಮ್ಮನ್ನು ಕೆಣಕಿದರೆ ನಾವು ಎಂತಹ ಕಠಿಣ ನಿರ್ಧಾರಕ್ಕೂ ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ವಿಜಯಪುರದಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸೈನಿಕರು ಹಲವು ದಶಕದಿಂದ ಪಾಕಿಸ್ತಾನದ ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದ್ದರೂ ಕೂಡ ಅದರಿಂದ ಪಾಠ ಕಲಿಯದೆ ಆಗಾಗ್ಗೆ ದಾಳಿ ಮಾಡಿ, ದೇಶದ ಭದ್ರತೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಅವರ ಈ ವರ್ತನೆ ಹೀಗೆಯೇ ಮುಂದುವರೆದರೆ ಮತ್ತೊಮ್ಮೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಆ ಸಾಮರ್ಥ್ಯ ನಮ್ಮ ಸೈನ್ಯಕ್ಕಿದೆ ಎಂದು ಪಾಕ್ ಗೆ ಎಚ್ಚರಿಕೆ ನೀಡಿದರು.
ವಿಜಯಪುರದಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದೆ. @INCKarnataka#ಪರಿವರ್ತನಾಯಾತ್ರೆ #ParivarthanaYathre#Vijayapura pic.twitter.com/2naOaqLuVp
— Siddaramaiah (@siddaramaiah) February 27, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401