ದಿನದ ಸುದ್ದಿ
ಯುವ ಗಾಯಕ, ಗಾಯಕಿಯರಿಗೆ ಸುವರ್ಣಾವಕಾಶ..!
ಸುದ್ದಿದಿನ, ಕೊಡಗು : ದೂರದರ್ಶನದ ಚಂದನವಾಹಿನಿಯು ಒಂದು ವಿನೂತನ ಮೆಗಾ ಸಂಗೀತ ಸ್ಪರ್ಧೆಯನ್ನು ಯುವಕ ಯುವತಿಯರಿಗೆ ಆಯೋಜಿಸುತ್ತಿದೆ.ಅಭ್ಯರ್ಥಿಗಳ ವಯಸ್ಸು 18 ರಿಂದ 35 ರೊಳಗಿನ ಮಿತಿಯಲ್ಲಿರಬೇಕು. ಕಿರುತೆರೆ ಗಾಯಕರಾಗ ಬಯಸುವ ಯುವಜನಾಂಗಕ್ಕೆ ಇದೊಂದು ಸುವರ್ಣಾವಕಾಶ.
ಅಂತರ ಜಿಲ್ಲಾ ಗಾಯನ ಪ್ರತಿಭಾನ್ವೇಷಣೆ, ಯುವ ಗಾಯಕ-ಗಾಯಕಿಯರ ಸ್ವರಶೋಧ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೂರದರ್ಶನದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.
ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನವಿದೆ. ಇದೇ ಮಾರ್ಚ್, 3 ರಂದು ಕೊಡಗಿನ ಗಾಯಕರಿಗೆ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಟ್ರೈಕಲರ್ ಅಕಾಡಮಿಯಲ್ಲಿ ಧ್ವನಿ ಪರೀಕ್ಷೆಯು ಆಕಾಶವಾಣಿಯ ಸಹಕಾರದೊಂದಿಗೆ ಏರ್ಪಡಿಸಲಾಗಿದೆ.
ಕೊಡಗು ಜಿಲ್ಲೆಯ ಗಾಯಕ ಗಾಯಕಿಯರು ಮಾತ್ರ ಇದರಲ್ಲಿ ಸ್ಫರ್ಧಿಸಬಹುದು. ನೋಂದಾವಣೆಗೆ ಆಧಾರ್ ಗುರುತಿನ ಚೀಟಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ-8197537777 ಸಂಪರ್ಕಿಸಬಹುದು ಎಂದು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಡಾ.ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401