ರಾಜಕೀಯ
ರಾಜಕಾರಣಿಗಳ ಸ್ವಾಗತಕ್ಕೆ ಸಿದ್ಧವಾಯ್ತು ಚಪ್ಪಲಿ ಹಾರ..!
ಸುದ್ದಿದಿ ಡೆಸ್ಕ್ : ರಾಜಕಾರಣಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಬರುತ್ತಾರೆ ಎಂದರೆ ಅವರ ಸ್ವಾಗತಕ್ಕೆ ಊರಿಗೆ ಊರೇ ತಳಿರು ತೋರಣ, ರಂಗೋಲಿ ಚಿತ್ತಾರಗಳಿಂದ ಸಿಂಗಾರಗೊಂಡಿರುವುದು ಸಹಜ. ಆದರೆ, ಈ ಗ್ರಾಮದಲ್ಲಿ ವಿಭಿನ್ನ, ವಿಚಿತ್ರ ಸ್ವಾಗತವೊಂದು ಸಿದ್ಧವಾಗಿದೆ.
ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಭೋಪಾಲ್ ಜಿಲ್ಲೆಯ ಓಂ ನಗರ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಲು ವಿಶೇಷ ಹಾರ ಸಿದ್ಧಮಾಡಿ ಊರ ಬಾಗಿಲಿಗೆ ತೋರಣದಂತೆ ಕಟ್ಟಿದ್ದಾರೆ.
ಗ್ರಾಮಸ್ಥರು ತಮ್ಮ ಮನೆಯಲ್ಲಿದ್ದ ಹಳೆ ಚಪ್ಪಲಿ, ಬೂಟು, ಕೆರದಿಂದ ವಿಶೇಷ ಹಾರ ಸಿದ್ಧವಾಗಿದೆ. ರಾಜಕೀಯ ಮುಖಂಡರು ಬರುವ ದಾರಿಯಲ್ಲಿ ಈ ಚಪ್ಪಲಿ ಹಾರಗಳನ್ನು ಹಾಕಿದ್ದಾರೆ. ರಾಜಕಾರಣಿಗಳು ಪ್ರತಿ ಬಾರಿ ಮತ ಕೇಳಲು ಮಾತ್ರ ಬರುತ್ತಾರೆ. ಜನರಿಗೆ ಬೇಕಾದ ಅಗತ್ಯ ಸೌಲಭ್ಯ ಒದಗಿಸಲು ಮುಂದಾಗುತ್ತಿಲ್ಲ. ಮಳೆಯಿಂದ ಅನೇಕ ಸಮಸ್ಯೆಗಳು ಉಂಟುಮಾಡಿವೆ. ಸಮಸ್ಯೆಗಳ ಕುರಿತು ಕಾರ್ಪೊರೇಟರ್, ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಅರ್ಥ ಮಾಡಿಸಲು ಚಪ್ಪಲಿ ಹಾರ ತಯಾರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.