ದಿನದ ಸುದ್ದಿ

ಸೋಶಿಯಲ್ ಮೀಡಿಯಾಗಳಿಗೆ ಆಧಾರ್ ಜೋಡಣೆ : ನೊಟೀಸ್ ಜಾರಿ

Published

on

ಸುದ್ದಿದಿನ,ದೆಹಲಿ: ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರ ಗುರುತು ಪತ್ತೆ ಹಚ್ಚುವ ಸಲುವಾಗಿ ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಜೋಡಿಸುವುದನ್ನು ಕಡ್ಡಾಯವಾಗಿಸಬೇಕು ಎಂದು ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ಸ್ಲಲಿಕೆಯಾಗಿರುವ ಅರ್ಜಿಳನ್ನು ಸುಪ್ರೀಂ ಕೋರ್ಟ್ ನ ಒಂದೇ ಪೀಠದಡಿ ತರಬೇಕು ಎಂದು ಫೇಸ್ ಬುಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ, ಟ್ವೀಟರ್, ಗೂಗಲ್ ಮತ್ತು ಯೂಟ್ಯೂಬ್ ಗಳಿಗೆ ನೊಟೀಸ್ ನೀಡಿದೆ. ವಿಚಾರಣೆಯನ್ನು ಸೆಪ್ಟಂಬರ್ 13ಕ್ಕೆ ಮುಂದೂಡಿದೆ.

ನಿನ್ನೆ ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು. ಇದೀಗ ಈ ಅರ್ಜಿಯ ವಿಚಾರಣೆ ಸೆ. 13ರಂದು ನಡೆಯಲಿದೆ.

Trending

Exit mobile version