ದಿನದ ಸುದ್ದಿ
ಅವರು ನನಗೆ ಬೇಕು : ಮೃತ ಯೋಧ ಗುರು ಪತ್ನಿಯ ಮುಗಿಲು ಮುಟ್ಟಿದ ಆಕ್ರಂದನ
ಸುದ್ದಿದಿನ, ಮಂಡ್ಯ : ಜಮ್ಮುವಿನ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ 44 ಯೋಧರ ಪೈಕಿ ಮಂಡ್ಯ ಜಿಲ್ಲೆಯ ಗುಡಿಗೆರೆ ಗ್ರಾಮದ ಗುರು (33) ಹುತಾತ್ಮ ಯೋಧ. 10 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು ಯೋಧ ಗುರು ಅವರು.
ಯೋಧ ಗುರು ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದವರು.ಇವರು ಗುಡಿಗೆರೆ ಕಾಲನಿಯ ತಮ್ಮ ಮಾವನ ಮಗಳಾದ ಕಲಾವತಿಯನ್ನು ವಿವಾಹವಾಗಿದ್ದರು. ಉಗ್ರರ ಅಟ್ಟಹಾಸಕ್ಕೆ ತುತ್ತಾದ ಯೋಧ ಗುರುವಿನ ಸುದ್ದಿ ಮನೆಗೆ ತಲುಪುತ್ತಿದ್ದಂತೆ ಅವರ ಪತ್ನಿ ತೀವ್ರ ಆಘಾತಕ್ಕೊಳಗಾಗಿ ರೋಧಿಸತೊಡಗಿದ್ದಾರೆ.
“ನನಗೆ ಅವರು ಕಾಲ್ ಮಾಡಿದ ಕ್ಷಣದಲ್ಲಿ ನನಗೆ ಮಾತನಾಡಲು ಆಗಲಿಲ್ಲ; ಆದರೆ ಈಗ ಮಾತಾಡೋಣ ಅಂದ್ರೆ ಅವರೇ ಇಲ್ಲ, ಅವರು ನನಗೆ ಬೇಕು” ಎಂದು ರೋಧಿಸುತ್ತಿದ್ದರೆ ನೆರೆಹೊರೆಯವರೆಲ್ಲ ಕಣ್ಣೀರು ಹಾಕಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401