ದಿನದ ಸುದ್ದಿ

ಅಡಗಿದ್ದ ಉಗ್ರರ ಬಂಧನ; ಗುಂಡಿನ ದಾಳಿಗೆ ಸೈನಿಕ ಸಾವು

Published

on


ಸುದ್ದಿದಿನ ದೆಹಲಿ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಡಗಿದ್ದ ಇಬ್ಬರು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಶನಿವಾರ ಬಂಧಿಸಲಾಗಿದೆ.ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟೆಕ್ಕಿನ್ ಹಳ್ಳಿಯಲ್ಲಿ ಭಯೋತ್ಪಾದಕರು ಇರುವ ಖಚಿತ ಮಾಹಿತಿ ಸಿಕ್ಕನಂತರ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಮಂಗಳವಾರ ನಡೆಸಿದ ಗುಂಡಿ ದಾಳಿಯಲ್ಲಿ ಉಗ್ರರು ಸೇರಿ ಹಿಜ್ಬುಲ್ ಮುಜಾಹಿದೀನ್ ಉಗ್ರಸಂಘಟನೆಯ ಇಬ್ಬರು ಸಾವನ್ನಪ್ಪಿದ್ದು, ಅದರಲ್ಲಿ ಒಬ್ಬ ಸೈನಿಕ ಮೃತಪಟ್ಟಿದ್ದಾರೆ. ನವೆಂಬರ್ 1ರಂದು ಕಿಶಾತ್ವಾರ್ ಜಿಲ್ಲೆಯಲ್ಲಿ ಬಿಜೆಪಿಯ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹಾರ್ ಮತ್ತು ಅವರ ಸಹೋದರ ಅಜಿತ್ ಅವರ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version