ದಿನದ ಸುದ್ದಿ
ದಾವಣಗೆರೆ | ಕ್ಯಾನ್ಸರ್ ಗೆದ್ದ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಯಲ್ಲಿ ಶಾಲೆಗೆ ಟಾಪರ್..!
ಸುದ್ದಿದಿನ,ದಾವಣಗೆರೆ:ಕ್ಯಾನ್ಸರ್ ಗೆದ್ದ ನಗರದ ನಿಟ್ಟುವಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಶಾಂತ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನಿಟ್ಟುವಳ್ಳಿಯ ನಿವಾಸಿಯಾಗಿರುವ ವಿದ್ಯಾರ್ಥಿನಿ ಶಾಂತಾ ಒಂಭತ್ತನೇ ತರಗತಿ ಇದ್ದಾಗ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಇವರ ತಂದೆ ತಾಯಿ ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ಮಗಳಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸಾರ್ವಜನಿಕರು ಹಾಗೂ ಶಿಕ್ಷಕರ ಸಹಕಾರದಿಂದ 13 ಲಕ್ಷ ರೂ. ಖರ್ಚು ಮಾಡಿ ಕ್ಯಾನ್ಸರ್ ಖಾಯಿಲೆಯಿಂದ ಗುಣಮುಖ ಮಾಡಿದರು.
ಆರೋಗ್ಯ ಸಮಸ್ಯೆ ಲೆಕ್ಕಿಸದ ಶಾಂತಾ ಓದಿನಲ್ಲಿ ತುಂಬಾ ಜಾಣೆಯಾಗಿದ್ದರು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂಬ ಪಣ ತೊಟ್ಟಿದ್ದ ಶಾಂತಾ ಅವರು ಆರೋಗ್ಯದ ಸಮಸ್ಯೆಗೆ ಸವಾಲು ಹಾಕಿ ಓದಿ 94% ಪಡೆದುಕೊಂಡಿದ್ದಾಳೆ. ಶಾಂತಾ ಅವರ ಈ ಸಾಧನೆಗೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243