ದಿನದ ಸುದ್ದಿ

ಡಾ. ಷಕೀಬ್ ಎಸ್ ಕಣದ್ಮನೆ ಅವರಿಗೆ ರಾಜ್ಯ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಡಾ. ಷಕೀಬ್ ಎಸ್ ಕಣದ್ಮನೆ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಏ. 15 ರಂದು “ಸಾಧನ ಕೇರಿಯ ಸಾಧಕ ರತ್ನ” ರಾಜ್ಯ ಪ್ರಶಸ್ತಿಯನ್ನು ಧಾರವಾಡದಲ್ಲಿ ಪ್ರಧಾನ ಮಾಡಲಾಯಿತು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ ಹ ದೇಶಪಾಂಡೆ ಸಂಭಾಂಗಣದಲ್ಲಿ ಅಯೋಜಿಸಲಾಗಿದ್ದ ಧಾರವಾಡ ಜಿಲ್ಲೆಯ ಅಕ್ಷರ ದೀಪ ಫೌಂಡೇಶನ್, ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇಧಿಕೆ ಧಾರವಾಡ-ಬೆಂಗಳೂರು ಹಾಗೂ ಕರ್ನಾಟಕ ಸೋಶಿಯಲ್ ಕ್ಲಬ್ ಹುಬ್ಬಳ್ಳಿ ಮತ್ತು ಗದಗವಾಣಿ ದಿನ ಪತ್ರಿಕೆ ಇವರ ಸಹಯೋಗದಲ್ಲಿ ನಡೆದ (ದ ರಾ ಬೇಂದ್ರೆ) ವರಕವಿಗೊಂದು ಕಾವ್ಯ ನಮನ ಯುಗಾದಿ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು ಎಂದು ಅಕ್ಷರ ದೀಪ ಫೌಂಡೇಶನ್, ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇಧಿಕೆಯ ಅಧ್ಯಕ್ಷರಾದ ಪ್ರವೀಣಕುಮಾರ ಕನ್ಯಾಳರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಷಕೀಬ್ ಎಸ್ ಕಣದ್ಮನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದ ಶ್ರೀ. ಷಂಷು ಕೆ ಬಿ ಮತ್ತು ಪರ್ವೀನ್ ಹೆಚ್ ದಂಪತಿಯ ಪುತ್ರರಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version