ದಿನದ ಸುದ್ದಿ
ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಎಸ್ ಜೆ ಎಮ್ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಉತ್ತೀರ್ಣ
ಸುದ್ದಿದಿನ,ಚಿತ್ರದುರ್ಗ : ನಗರದ ಎಸ್ ಜೆ ಎಂ ಕಾಲೇಜ್ ಆಫ್ ಫಾರ್ಮಸಿ ಯ ಅಂತಿಮ ವರ್ಷ ಬಿ ಫಾರ್ಮಸಿ ಪದವಿ ಪಡೆದ ವಿದ್ಯಾರ್ಥಿಗಳಾದ ಸುಶೀಲಾ ಕುಮಾರಿ 357 ನೇ ರ‍್ಯಾಂಕ್, ನಿತಿನ್ ಎಸ್ ದೇವ್ 739 ನೇ ರ‍್ಯಾಂಕ್ , ಪ್ರವರ ಸೇನಾ 3026ನೇ ರ‍್ಯಾಂಕ್ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಾದ ನವ್ಯ ಜಿ ಹಿರೇಮಠ್ 1816 ನೇ ರ‍್ಯಾಂಕ್ ನಸೀಮ ಜಹಾನ್ 2245 ನೇ ರ‍್ಯಾಂಕ್ ಪಡೆದಿರುತ್ತಾರೆ.
GPAT ಗ್ರಾಜುಯೇಟ್ ಫಾರ್ಮಸಿ ಆಪ್ಟಿಟ್ಯೂಡ್ ಟೆಸ್ಟ್ (GPAT) ಮಾನ್ಯತೆಯನ್ನು ಪಡೆದು ತೇರ್ಗಡೆ ಯಾದ ವಿದ್ಯಾರ್ಥಿಗಳಿಗೆ National Institute of Pharmaceutical Education & Research (NIPER) ನೈಪರ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ನಡೆಸುವ ಪರೀಕ್ಷೆಗಳಲ್ಲಿ ಈ ವಿದ್ಯಾರ್ಥಿಗಳು ಮಾನ್ಯತೆಯನ್ನು ಪಡೆದಿರುತ್ತಾರೆ.
ಈ ಸ್ನಾತಕೋತ್ತರ ಔಷಧಿ ವಿಜ್ಞಾನ ಪರೀಕ್ಷೆಯಲ್ಲಿ ಮಾನ್ಯತೆ ಹೊಂದಿದವರಿಗೆ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸಕ್ಕಾಗಿ ಪ್ರತಿ ತಿಂಗಳು ಸರಿಸುಮಾರು 18 ರಿಂದ 20 ಸಾವಿರ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ. ಈ ಮಾನ್ಯತೆಯನ್ನು ಪಡೆದಿರುವ ವಿದ್ಯಾರ್ಥಿಗಳು ಕಾಲೇಜಿಗೆ ಹಾಗೂ ಪೋಷಕರಿಗೂ ಗೌರವವನ್ನು ಮತ್ತು ಇತರ ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ಕೊಟ್ಟಿರುತ್ತಾರೆ.
ಪೋಷಕರಿಗೆ ಸ್ನಾತಕೋತ್ತರ ಪದವಿಯ ಶುಲ್ಕ ಹಾಗೂ ಖರ್ಚುಗಳ ಭಾರವನ್ನು ನೀಗಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಸ್ ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ ಎಸ್ ನಾಗರಾಜ್ ಮತ್ತು ಕಾಲೇಜಿನ ಆಡಳಿತ ಮಂಡಳಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಶುಭಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243