ಸಿನಿ ಸುದ್ದಿ

‘ಕಿಚ್ಚ ಮತ್ತು ಡಿ ಬಾಸ್’ ಮುನಿಸು ಮುರಿಯಲು ಸಜ್ಜಾಯ್ತು ವೇದಿಕೆ..!

Published

on

ಸುದ್ದಿದಿನ, ಬೆಂಗಳೂರು | ದು ಸ್ಯಾಂಡಲ್​ವುಡ್​ನ ಎಕ್ಸ್​ಕ್ಲೂಸಿವ್​​ ಸುದ್ದಿ.ಚಾಲೆಂಜಿಂಗ್​ ಸ್ಟಾರ್​​​ ದರ್ಶನ್, ಕಿಚ್ಚ ಸುದೀಪ್​​ಗೆ ಸಂಬಂಧಿಸಿದ ಸ್ಫೋಟಕ ಸುದ್ದಿ.

ಹಳೆಯ ಕಹಿ ನೆನಪು ಮರೆತು ಅಪ್ಪುಗೆಗೆ ರೆಡಿಯಾಗಿದ್ದಾರೆ ಹಳೇ ದೋಸ್ತ್​​ ಗಳು.
ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್​ ಕೊಡಲು ಕಾಯ್ತಿದ್ದಾರೆ ಈ ಬಿಗ್​ ಸ್ಟಾರ್ಸ್​. ಇವರಿಬ್ಬರನ್ನು ಒಟ್ಟು ಗೂಡಿಸುತ್ತಿರೋದು ಯಾರು..? ಯಾವಾಗ?
ಸುದ್ದಿದಿನದ ಬಳಿ ಇದೆ ಕುಚುಕು ಗೆಳೆಯರು ಒಂದಾಗ್ತಿರೋ ಎಕ್ಸ್​ಕ್ಲೂಸಿವ್ ಮಾಹಿತಿ.

ಇದು ಸ್ಯಾಂಡಲ್​ವುಡ್​ನ ಎಕ್ಸ್​ಕ್ಲೂಸಿವ್​​ ಸುದ್ದಿ.
ಮತ್ತೆ ಒಂದಾಗ್ತಿದ್ದಾರೆ ಚಾಲೆಂಜಿಂಗ್​ ಸ್ಟಾರ್​​​ ದರ್ಶನ್, ಕಿಚ್ಚ ಸುದೀಪ್​​- ಇಬ್ಬರನ್ನೂ ಒಂದು ಮಾಡ್ತಿದ್ದಾರೆ ಮಂಡ್ಯದ ಗಂಡು ಅಂಬರೀಶ್. ಆಗಸ್ಟ್​ 10ರಂದೇ ಮುಖಾಮುಖಿ ಆಗಲಿದ್ದಾರೆ ದಚ್ಚು-ಕಿಚ್ಚ.
ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದ ಸಾಂಗ್​​ ರಿಲೀಸ್​ನಲ್ಲಿ ಮುಖಾಮುಖಿಯಾಗಲಿದ್ದಾರೆ. ಕಿಚ್ಚ ಸುದೀಪ್​​ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಸಿನಿಮಾ-
ಅಂಬರೀಶ್​ ಹತ್ತು ವರ್ಷಗಳ ನಂತರ ಹೀರೋ ಆಗಿ ನಟಿಸ್ತಿರೋ ಸಿನಿಮಾ ಸಾಂಗ್​​​ ರಿಲೀಸ್​ ಕಾರ್ಯಕ್ರಮಕ್ಕೆ ಬರ್ತಿದ್ದಾರೆ.

ದಕ್ಷಿಣದ ಬಿಗ್​ ಸ್ಟಾರ್ಸ್​, ರಜಿನಿಕಾಂತ್, ಚಿರಂಜೀವಿ,ಧನುಷ್ ಸೇರಿ ಸಿನಿಮಾ ದಿಗ್ಗಜರಿಗೆ ಆಹ್ವಾನ ನೀಡಿದ್ದು, ಈ ಶುಭ ಸಂದರ್ಭದಲ್ಲೇ ಸುದೀಪ್​​​-ದರ್ಶನ್​​​ ರಾಜಿ ಮಾಡಿಸುವ ಅಂಬರೀಶ್ . ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್​​ ನಟರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನವಿತ್ತಿದ್ದಾರೆ. ಗುರುದತ್​​ ಗಾಣಿಗಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version