ದಿನದ ಸುದ್ದಿ
ಕಿಚ್ಚನ ಭರ್ಜರಿ ರೋಡ್ ಶೋ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರ ಅಭ್ಯರ್ಥಿ ಬಿ.ಜಿ. ಅಜಯ್‌ಕುಮಾರ್ ಪರ ನಗರದಲ್ಲಿ ಚಿತ್ರನಟ ಸುದೀಪ್ ಅಬ್ಬರದ ಪ್ರಚಾರ ನಡೆಸಿದರು.
ನಗರದ ನಿಟ್ಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಿಂದ ರೋಡ್ ಶೋ ಪ್ರಾರಂಭಿಸಿದ ಕಿಚ್ಚಾ ಸುದೀಪ್‌ಗೆ, ಅಭಿಮಾನಿಗಳು ಬೃಹತ್ ಗಾತ್ರದ ಹಾರ ಹಾಕುವ ಮೂಲಕ ಅಭಿಮಾನ ಮೆರೆದರು.
ಈ ವೇಳೆ ಸೇರಿದ್ದ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಸುದೀಪ್ ಬದಲಾವಣೆ ಬರಲಿ ಬಯಸುವ ವ್ಯಕ್ತಿ ನಾನು. ಆದ್ದರಿಂದ ದಾವಣಗೆರೆ ಜನತೆ ಲೋಕಿಕೆರೆ ನಾಗರಾಜ್ ಅವರನ್ನು ಗೆಲ್ಲಿಸಿ ಬದಲಾವಣೆ ತನ್ನಿ. ಆಗ ನಾನು ಮತ್ತೊಮ್ಮೆ ಬರುತ್ತೇನೆ. ನಿಮ್ಮ ದಾವಣಗೆರೆ ಬೆಣ್ಣೆ ದೋಸೆ ತಿನ್ನಿಸಿ ಎಂದರು.
ನಂತರ ಕಿಚ್ಚ ಸುದೀಪ್ ಅಭಿಮಾನಿಗಳಿಗಾಗಿ ವೀರ ಮದಕರಿ ಚಿತ್ರದ ಡೈಲಾಗ್ ಹೇಳಿ ಜನರನ್ನು ರಂಜಿಸಿದರು. ದಾ- ರಿಯುದ್ದಕ್ಕೂ ಕಿಚ್ಚಾ ಸುದೀಪ್ ಅಭಿಮಾನಿಗಳು ಹರ್ಷೋದ್ಧಾರ ಮಾಡಿದರು. ಈ ವೇಳೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಲ್ಲಿ ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243