ಭಾವ ಭೈರಾಗಿ

ಕವಿತೆ | ಮಲೆನಾಡಿನವಳು

Published

on

 

ವಳುಟ್ಟ ಸೀರೆ-
ಗುಂಗಾರಿ, ಕತ್ತಲು
ಅದೇ ತರಹ ಸೆರಗು ಚೋಟು
ಶುನಕ ಬಾಲದ ನೆನಪು
ಅತ್ತಿ ಹಣ್ಣುಗಳ ಮೇಲೆ
ತುಸು ಜಾರಿದ ಸ್ಕ್ರೀನು.

ನಿರಿಗೆ-
ಮಹಡಿಯ ಮೆಟ್ಟಿಲು
ಮುದಿಯನ ಸುಕ್ಕು ಮೋರೆ
ಮುಚ್ಚಿದ ಪುಸ್ತಕ
ಅಂಗಾಲುಗಳ ಕಚ್ಚಿ ಹಿಡಿದ
ಚಪ್ಪಲಿ ಅಶೋಕದ ಚಿಗುರು.

ವದನ-
ಚೂಪು ಕೆಂಬಣ್ಣ
ಗುಲಾಬಿ ಮೈ ನಾಸಿಕಿಂದಿರ
ಹವಳ ದುಟಿ
ತುಸು ದೊಡ್ಡ ಕಣ್ಣ ಗುಡ್ಡೆ
ಅಂಚು ನೈದಿಲೆಸಳು
ದಂತಗಳಿಂದೋದಯ
ಬಾಳೆಯ ದಿಂಡು ದಪ್ಪ.

ಸರ-
ಚಿನ್ನದ್ದು ಕೊರಳು?
ಪದಕ ನೀಲಿ ಹರಳು?
ಇಲ್ಲಿಲ್ಲ
ಕರ್ಣದೊಳ್ ಪಚ್ಚೆ ಹರಳಿನೋಲೆ
ಕಣಗಲ ಹೂ
ಮೂಗು ಬೊಟ್ಟಿನ್ಹರಳು

ನೊಸಲಲ್ಲಿ-
ಕೆಂಪು, ಮಲ್ಲಿಗೆಯದಳ

ಮತ್ತೆ-
ಮುಡಿಯು ಕೊಪ್ಪಿಗೆ ಕನಕಾಂಬರ
ಕೈಗೊಂದೊಂದು ರಿಂಗು
ಸ್ನೊ, ಪೌಡರ್ರು, ಲಿಫ್ ಸ್ಟಿಕ್ಕು
ಮತ್ತೆ ಕಾಡಿಗಿಲ್ಲದ
ಸಹಜ, ಸೊಬಗವಳು-
ಡಾಂಬರುಡುಗೆಯವಳು
ಮಲೆನಾಡಿನವಳು
ನಗು ಬಿರಿವ ಮುಗುಳು
ಮುನಿಸು ಮಸಣ.

ಭಾವ-
ಕಲ್ಪನೆಗೆ ಜರಡಿಯಾಡಲು
ಒಂದೇ ಒಂದೇ
ಹಮ್ಮಿಲ್ಲ ತಾನೇರೆಂಬ
ಹೂ-ನೀರಿಗಿಲ್ಲ ದಂತರ

ಮಾತು-
ತಕ್ಕಡಿ, ಮುತ್ತು
ನಡಿಗೆ ಹಂಸಗಜ
ಮೋಡಿ ಹಾಕುವ ಗಂಡಿಗೆ
ಹಾಕುವಳು ಸಜಾ!

ಎನ್. ರುದ್ರಪ್ಪ ನವಿಲೇಹಾಳ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version