ಭಾವ ಭೈರಾಗಿ

ನಿದ್ರಾದೇವಿಗೆ ನಮಸ್ಕಾರ

Published

on

 

ನಿದ್ರಾದೇವಿ ಸುಖಾಸುಮ್ಮನೆ
ಒಂದು ಸಂಚನ್ನು ಹೂಡಿದಳು:
ರಾತ್ರಿಯಿಡೀ
ಮಳೆಗೆ ಕೊಚ್ಚಿಹೋದ
ಗುಡಿಸುಲುಗಳನ್ನು ನೆನಪಿಸಿದಳು, ಆರ್ತಮುಖಗಳನ್ನು ಮುಂದಿರಿಸಿದಳು
ಬೆಳಗ್ಗೆ
ಕೆಂಪು ಕಣ್ಣುಗಳನ್ನೊಮ್ಮೆ ನೋಡಿಕೊಂಡಾಗ
ನಿದ್ರಾದೇವಿಗೆ ಕೃತಜ್ಞತೆ ಹೇಳುವ
ವಿನಯವನ್ನು ಕಲಿಸಿದಳು.

ಸೂರಿಲ್ಲದೆ ಚಳಿಯನ್ನೇ
ಹೊದ್ದು ಮಲಗಿದ
ಲಕ್ಷಾಂತರ ದೇಹದ ನೆನಪನ್ನು

ಮಾರನೆಯ ಜಾವದಲ್ಲಿ
ಪಾಪ ಅವಳಿಗೆ ಕರುಣೆ
ಆರ್ತ ಕಣ್ಣನೋಟಗಳನ್ನೇ ತುಂಬಿಕೊಂಡ
ಕಣ್ಣ ಬಟ್ಟಲುಗಳಲ್ಲಿ ನಿದ್ರೆಯೇ ಸುಳಿಯದು.

ಭಗವತಿ ಎಂ.ಆರ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version