ಭಾವ ಭೈರಾಗಿ
ಕವಿತೆ | ಮಡಿವಂತ ಪ್ರಧಾನಿಯ ಬಗ್ಗೆ
ಕೇಳಿದ್ದೇನೆ : ಆ ಪ್ರಧಾನಿ ಕುಡಿಯುವುದಿಲ್ಲವಂತೆ
ಮೀನು ಮಾಂಸ ತಿನ್ನುವುದಿಲ್ಲವಂತೆ, ಸಿಗರೇಟು ಚುಟ್ಟ ಸೇದುವುದಿಲ್ಲವಂತೆ
ಅವನಿರುವುದು ಒಂದು ಸಾಧಾರಣ ಮನೆಯಲ್ಲಂತೆ.
ಮತ್ತೆ ಇದನ್ನೂ ಕೇಳಿದ್ದೇನೆ : ಆ ದೇಶ ಬಡಜನ
ಹೊಟ್ಟೆಗಿಲ್ಲದೆ ಪಾಡು ಪಡುತ್ತಿದ್ದಾರಂತೆ.
ಅದರ ಬದಲು ಹೀಗೆಂದು ಕೇಳುವುದು ಎಷ್ಟು ಮೇಲು :
ಪ್ರಧಾನಿ ಕ್ಯಾಬಿನೆಟ್ ಮೀಟಿಂಗುಗಳಲ್ಲೂ ಕುಡಿದು ಕೂತಿರುತ್ತಾನೆ
ತಜ್ಞರಲ್ಲದ ಕೆಲಮಂದಿ ಕಾಯಿದೆ ಕಾನೂನುಗಳನ್ನು ಬದಲಾಯಿಸುತ್ತಿದ್ದಾರೆ
ಅವನು ಅವರ ಪೈಪಿಂದೇಳುವ ಹೊಗೆಯನ್ನೇ ನೋಡುತ್ತಿರುತ್ತಾನೆ
ಆ ದೇಶದಲ್ಲಿ ಬಡಜನರೇ ಇಲ್ಲ.
– ಮೂಲ, ಜರ್ಮನ್ : ಬೆರ್ಟೋಲ್ಟ್ ಬ್ರೆಕ್ಟ್
ಕನ್ನಡಕ್ಕೆ : ಶಾ. ಬಾಲುರಾವ್
ಸುದ್ದಿದಿನ.ಕಾಂ|ವಾಟ್ಸಾಪ್|9986715401