ಭಾವ ಭೈರಾಗಿ

ಕವಿತೆ | ಇದು ಒಬ್ಬ ಚೋಮನ ಕಥೆಯಲ್ಲ

Published

on

 

ದಿನ ಬೆಳಗ್ಗೆದ್ದು, ಧಣಿಗಳ ಮನೆಗೊಡಿ,
ಹಲ್ಕಿರಿದು ನಕ್ಕು, ಸುಮ್ಮನೆ ಮಾತಾಡಿ,
ಎತ್ತಿಹಾಕಿದ ಎಂಜಲ ಉಂಡು,
ಎಸೆದ ಎರಡು ರೂಪಾಯಿಗಳನು ಹೆಕ್ಕಿ,
ನಡುವಲ್ಲಿ ಸಿಕ್ಕಿಸಿ, ಹೊಲಕ್ಕೆ ನಡೆದು,
ಬೆನ್ನು ಬಗ್ಗಿಸಿ,ಬೆವರ ಸುರಿಸಿ, ರಕ್ತ ಹರಿಸಿ,
ಅವರ ಬದುಕ ಕಟ್ಟಿ,
ಆಳದ ನೋವನ್ನು ಬಿಗಿಹಿಡಿದು,
ಮನಸಲೇ ಧಣಿಗಳಿಗೆ ಧಿಕ್ಕರಿಸಿ ಉಗಿದು,
ನಿನ್ನೆಯ ನೋವ ಮರೆತು,
ನಮ್ಮದ್ದಲ್ಲದ ಕನಸ ಕಂಡು,
ಜೀವನ ಸಾಗುತ್ತಿರಲು,
ಕನಸು ಕೇವಲ ಅವರ ಸ್ವತ್ತಲ್ಲ,
ಜೀವಂತವಿರುವದೆ ಬದುಕಲ್ಲ,
ಇದು ಒಬ್ಬ ಚೋಮನ ಕಥೆಯಲ್ಲ.

ಸಂತೋಷ ಉಂಡಾಡಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version