ಭಾವ ಭೈರಾಗಿ

ಕವಿತೆ | ಕಾಲ

Published

on

 

ಕಾಲ ಕರುಳಿಲ್ಲದ ಕರೀ ಘಡವ,
ಕದಿಯುವುದರಲ್ಲಿ ಕತ್ತೆಭಡವ.
ಬಂತೆನ್ನಿ ಆಸಾಮಿ ಪಟ್ಟಿಗೆ
ಹಾರಿಸುತ್ತಾನೆ ಒಟ್ಟಿಗೆ :
ನಾಲಿಗೆಯಿಂದ ಮಾತು,
ಆಲಿಗಳಿಂದ ಬೆಳಕು,
ಎದೆಯಿಂದ ಚಿಲುಮೆ,
ಕೈಯಿಂದ ದುಡಿಮೆ.
ಹೀಗೆ ಕಿತ್ತು ಪಟ ಪಟ ಇಟ್ಟಿಗೆ
ತಳ್ಳಿಬಿಡುತ್ತಾನೆ ದೈತ್ಯ
ಬ್ರೂಸ್ ಲೀಯನ್ನೂ ಸಹ
ಆರಡಿ ಅಗಲದ
ಮಣ್ಣಿನ ತೊಟ್ಟಿಗೆ..!

ಡಾ.ಎನ್‌.ಎಸ್.ಲಕ್ಷ್ಮೀನಾರಾಯಣ ಭಟ್ಟ

(‘ಚಿತ್ರಕೂಟ’ ಕವನ ಸಂಕಲನದಿಂದ ಈ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version