ದಿನದ ಸುದ್ದಿ

ಸೂರ್ಯ ಗ್ರಹಣ| ಶಾಂತಿಗಾಗಿ ಹೋಮ

Published

on

ಸುದ್ದಿದಿನ,ದಾವಣಗೆರೆ :ಸೂರ್ಯ ಗ್ರಹಣದ ಶಾಂತಿಗಾಗಿಹೋಮ ಇಲ್ಲಿನ ಕೆಬಿ ಬಡವಾಣೆಯಲ್ಲಿರುವ ರಾಘವೇಂದ್ರ ಮಠದಲ್ಲಿ ಸೂರ್ಯ ಗ್ರಹಣದ ಶಾಂತಿಗಾಗಿ ಹೋಮಾ ಹವನ ಪೂಜಾ ಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು.ಸತತ ಒಂದುವರೆ ಗಂಟೆ ಮಠದಲ್ಲಿ ಹೋಮ ನಡೆಯಿತು.

ಈ ವೇಳೆ ಭಕ್ತರುದೋಷ ಪರಿಹಾರಕ್ಕಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡ ಶಾಂತಿ ಹೋಮದಲ್ಲಿ ಭಾಗವಹಿಸಿದ್ದರು.ಮನೆಯಿಂದ ಹೊರ ಬರದ ಜನರು ಕಂಕಣ ಸೂರ್ಯಗ್ರಹಣ ಗೋಚರವಾಗುತ್ತದೆಎಂದು ನಗರದಲ್ಲಿ ಬಹುತೇಕ ಜನರುಯಾರು ಸಹ ಮನೆಯಿಂದ ಹೊರ ಬಂದಿರಲಿಲ್ಲ.

ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದಜಯದೇವ ಸರ್ಕಲ್ ಲ್ಲಿ ವಾಹನಗಳ ಸಂಖ್ಯೆಯೇ ವಿರಳವಾಗಿತ್ತು. ಅಷ್ಟ ಅಲ್ಲದೆ ಅಂಗಡಿಮುಂಗಟ್ಟುಗಳು ಕೂಡ ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದವು.

ಸೂರ್ಯ ಗ್ರಹಣಕ್ಕೆ ಭಯ ಪಟ್ಟು ಜನರು ಮನೆಯಿಂದ ಹೊರ ಬಂದಿರಲಿಲ್ಲ. ಗ್ರಹಣದ ಸಂದರ್ಭದಲ್ಲಿಮನೆಯಿಂದ ಹೊರ ಬಂದರೆ ಏನಾದ್ರು ಅನಾಹುತ ಆಗಬಹುದು ಇಲ್ಲ ದೋಷ ಬರಬಹುದುಎನ್ನುವ ನಿಟ್ಟಿನಲ್ಲಿ ಮನೆಯಲ್ಲೇ ಕೆಲವರು ಸೇರಿಕೊಂಡಿದ್ದರು. ಅಷ್ಟೆ ಅಲ್ಲದೆ ಗ್ರಹಣಶಾಂತಿಗಾಗಿ ಮನೆಯಲ್ಲಿಯೇ ಪೂಜೆ ಮಾಡುವಂತ ದೃಶ್ಯಗಳು ಕಂಡು ಬಂದವು.

ಸೂರ್ಯಗ್ರಹಣ ನೋಡಲುಬಂದವರಿಗೆಮಳೆಯಿಂದ ನಿರಾಸೆ ನಗರದಲ್ಲಿ ಬೆಳಿಗ್ಗೆಯಿಂದಮೋಡ ಮುಚ್ಚಿದ ವಾತವರಣ ಹಾಗೂ ಜಿನಿ ಜಿನಿಯಾಗಿ ಮಳೆ ಬೆಳಿಗ್ಗೆ ಆರಂಭವಾಗಿದ್ದರಿಂದ ಸೂರ್ಯಗ್ರಹಣ ವೀಕ್ಷಣೆ ಮಾಡಲು ಬಂದ ಜನರಿಗೆ ನಿರಾಸೆಯಾಯಿತು.

ಸಿದ್ದಗಂಗಾ ಶಾಲೆಯಲ್ಲಿ ಸೂರ್ಯಗ್ರಹಣನೋಡಲು ವ್ಯವಸ್ಥೆ ಮಾಡಲಾಗಿತ್ತು ಆದ್ದರೆಬೆಳಿಗ್ಗೆಯೇ ಒಂದು ಗಂಟೆ ಕಾಲ ಜಿನಿ-ಜಿನಿಯಾಗಿ ಮಳೆ ಆರಂಭವಾಗಿರುವುದರಿಂದ ಮತ್ತು ಮೋಡಮುಚ್ಚಿದ ಹಿನ್ನಲೆಯಿಂದ ಸೂರ್ಯ ಗ್ರಹಣ ಗೋಚರವಾಗಲಿಲ್ಲಸೂರ್ಯಗ್ರಹದ ಕೌತಕ ದೃಶ್ಯ ವೀಕ್ಷಣೆ ಮಾಡಲು ಬಂದ ಜನರು ನಿರಾಸೆಯಿಂದ ಮನೆಗೆ ತೆರಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version