ದಿನದ ಸುದ್ದಿ
ತರಳಬಾಳು ಶ್ರೀಗಳಿಂದ ‘ಪುಣ್ಯ ಕೋಟಿ ಉಳಿಸಿ’ ಅಭಿಯಾನ
ಸುದ್ದಿದಿನ ಡೆಸ್ಕ್ : ಸಿರಿಗೆರೆ ಸಮೀಪದ ಶಿವಕುಮಾರ ವನದಲ್ಲಿ ತರಳಬಾಳು ಜಗದ್ಗುರು ಬೃಹನ್ಮಠದ ಆಶ್ರಯದಲ್ಲಿ ಸುಸಜ್ಜಿತ ಗೋಶಾಲೆಯನ್ನು ಆರಂಭಿಸಲಾಗುವುದೆಂದು ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ತಿಳಿಸಿದರು.
ರಾಜ್ಯದ ಹಲವೆಡೆ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದೆ.ಮುಂದಿನ ಬೇಸಿಗೆ ದಿನಗಳಲ್ಲಿ ದನಕರುಗಳಿಗೆ ಮೇವು ಮತ್ತು ನೀರಿನ ತೊಂದರೆ ಉಂಟಾಗುವ ನಿರೀಕ್ಷೆ ಇದೆ.ಜನ ಮತ್ತು ಜಾನುವಾರುಗಳ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಿರಿಗೆರೆ ಸಮೀಪದ ಶ್ರೀ ಮಠದ ಒಡೆತನದ ಸಾವಿರ ಎಕರೆಯ ಅರಣ್ಯ ಪ್ರದೇಶದಲ್ಲಿ ಗೋಶಾಲೆಯನ್ನು ತೆರೆಯಲಾಗುವುದು.ಇದನ್ನು ಜಿಲ್ಲಾಡಳಿತ ಮತ್ತು ತರಳಬಾಳು ಮಠದ ಸಹಯೋಗದಲ್ಲಿ ನಿರ್ವಹಿಸುವ ಉದ್ದೇಶ ಇದೆ ಎಂದು ತಿಳಿಸಿದರು.
ಮುಖ್ಯಾಂಶಗಳು
1 ) ಸಿರಿಗೆರೆ ಸಮೀಪದ ಶ್ರೀ ಮಠದ ಸಾವಿರ ಎಕರೆ ಭೂಮಿಯಲ್ಲಿ ವಿಶಾಲ ಗೋಶಾಲೆ ತೆರೆಯಲು ನಿರ್ಧಾರ.
2) ಕರ್ನಾಟಕದ ಯಾವುದೇ ಸ್ಥಳದ ಗೋವುಗಳಿಗೆ ಮುಕ್ತ ಅವಕಾಶ.
3)ದನಕರುಗಳ ನಿರ್ವಹಣೆಗೆ ತಾತ್ಕಾಲಿಕ ಶೆಡ್ ನಿರ್ಮಾಣ.
4) ದೂರದ ಊರುಗಳಿಂದ ದನಕರುಗಳನ್ಪು ಕರೆತರಲು ಶ್ರೀ ಮಠದಿಂದ ವಾಹನ ಸೌಕರ್ಯ ಕಲ್ಪಿಸುಲಾಗುವುದು.
5) ಜಾನುವಾರುಗಳ ಜೊತೆಗೆ ಬರುವ ದನಕರುಗಳ ಮಾಲೀಕರಿಗೆ ವಸತಿ ಮತ್ತು ಊಟದ ವ್ಯವಸ್ಥೆ.
6) ನೀರಿನ ಸಮಸ್ಯೆ ಬಾರದಂತೆ ಹೊಸ ಬೊರ್ ವೆಲ್ ಗಳನ್ನು ಕೊರೆಸಲಾಗುವುದು.
7) ಮುಂಚಿತವಾಗಿ ಮೇವು ಸಂಗ್ರಹಣೆಗೆ ಚಾಲನೆ. ಚನ್ನಗಿರಿ, ಭದ್ರಾವತಿ, ಶಿವಮೊಗ್ಗ, ಹೊನ್ನಾಳಿ, ಹರಿಹರ ,ದಾವಣಗೆರೆ ತಾಲ್ಲೂಕು ಭಕ್ತರುಗಳಿಂದ ಭತ್ತದ ಬೆಳೆಯ ಕಟಾವಿನ ತರುವಾಯ ಮೇವುಸಂಗ್ರಹಣೆಯ ಬೃಹತ್ ಕಾರ್ಯಕ್ರಮ.
ಪೂಜ್ಯರಿಂದ ಗೋಶಾಲೆಗಾಗಿ ಇಂದಿನಿಂದ ಮೇವು ಸಂಗ್ರಹಣೆಗೆ ಚಾಲನೆ
ಇಂದು ದಾವಣಗೆರೆ ತಾಲೂಕಿನ ಬಸಾಪುರ, ಬೋರಗೊಂಡನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ತರಳಬಾಳು ಜಗದ್ಗುರುವರ್ಯರು ಆಗಮಿಸಿ ತೀವ್ರ ಬರದಿಂದ ಬಸವಳಿದ ರೈತರ ಜಾನುವಾರುಗಳ ಪೋಷಣೆಗಾಗಿ ಮೆದಿಕೆರೆಪುರದ ಬಳಿ ಆರಂಭಿಸಲಾಗಿರುವ *ಶ್ರೀ ಶಿವಕುಮಾರ ಗೋಶಾಲೆಗೆ* ಮೇವನ್ನು ಸಂಗ್ರಹಿಸುವ ಸದ್ದುದೇಶದಿಂದ ಹಾಗೂ ದಾವಣಗೆರೆ ವ್ಯಾಪ್ತಿಯಲ್ಲಿನ ಏತನೀರಾವರಿಗೆ ಒಳಪಡುವ ಕೆರೆಗಳ ಗ್ರಾಮಗಳಿಗೆ ಅಂತರ್ಜಲ ಸಂರಕ್ಷಣೆ ಮಾರ್ಗದರ್ಶನವಿತ್ತು ಅಪಾರ ಭಕ್ತವಂದದೊಡನೆ ಮೇವಿನ ಸಂಗ್ರಹಣೆಗೆ ಮುಂದಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401