ದಿನದ ಸುದ್ದಿ
ತರಳಬಾಳು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರ 26 ನೇ ಶ್ರದ್ಧಾಂಜಲಿ
ಸುದ್ದಿದಿನ ಡೆಸ್ಕ್ : ಜಗದೊಳಿತಿಗಾಗಿ ಜನಿಸಿದ ಜನಮಾನಸದ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳ 26 ನೇ ಶ್ರದ್ದಾಂಜಲಿ ದಾಸೋಹ ಸೇವೆಗೆ ಭದ್ರಾವತಿ ತಾಲ್ಲೂಕಿನ ಶಿಷ್ಯಸಮಾಜ ನೂರಾರುಕ್ವಿಂಟಲ್ ಅಕ್ಕಿ ಸಮರ್ಪಣೆ ಮಾಡಿತು.
ನಾಡಿನ ಸಾಮಾಜಿಕ , ಶೈಕ್ಷಣಿಕ,ಧಾರ್ಮಿಕ ಕ್ಷೇತ್ರದ ದಿವ್ಯಚೇತನ , ಲೋಕದ ತರಳರಬಾಳಿನ ಮಹಾಬೆಳಗು, ಶ್ರೀ ಮದ್ದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 26 ನೆಯ ಶ್ರದ್ಧಾಂಜಲಿ ಸಮಾರಂಭ ಸೆಪ್ಟೆಂಬರ್ 20 ರಿಂದ 24 ರವರೆಗೆ ಜರುಗಲಿದೆ.ಲಕ್ಷಾಂತರ ಶಿಷ್ಯ ಸಮುದಾಯ ಪಾಲ್ಗೊಂಡು ಶ್ರೀ ಗುರು ಕೃಪೆ ಪಡೆಯುವ ಈ ದಿನದ ದಾಸೋಹ ಕೈಂಕರ್ಯಕ್ಕೆ ಭದ್ರಾವತಿ ತಾಲ್ಲೂಕಿನ ಶಿಷ್ಯಸಮಾಜ ನೂರಾರು ಕ್ವಿಂಟಲ್ ಅಕ್ಕಿಯನ್ನು ಸಮರ್ಪಣೆಗೈದು,ಬೇಡಬಾರದು ಜಂಗಮ, ಬೇಡಿಸಿಕೊಳ್ಳಬಾರದು ಭಕ್ತ ಎಂಬ ಅಣ್ಣನವರ ವಾಣಿಗನುಗುಣವಾಗಿ ಪರಮಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಸಾನ್ನಿಧ್ಯ ಮುಖೇನ ತನು ಮನ ಧನದ ಭಕ್ತಿಯನ್ನು ಅರ್ಪಿಸಿದರು.ಈ ಸಮಾರಂಭದಿ ಶಿವಮೊಗ್ಗೆಯ ಮಾನ್ಯ ಲೋಕಸಭಾ ಸದಸ್ಯರಾದ ಶರಣ ಬಿ.ವೈ ರಾಘವೇಂದ್ರರವರು, ಭದ್ರಾವತಿ ಶಾಸಕರಾದ ಶರಣ ಸಂಗಮೇಶ್ ರವರು,ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಕೈಗಾರಿಕಾ ಉದ್ಯಮಿಗಳಾದ ಶರಣ ಎಸ್. ರುದ್ರೇಗೌಡರು,ಕರ್ನಾಟಕ ರಾಜ್ಯ ರೈತ ಸಂಘದ ನೇತರಾರಾದ ಶರಣ ಬಸವರಾಜಪ್ಪ ಸೇರಿದಂತೆ ಹಲವು ಮುಖಂಡರು ,ಸಾವಿರಾರು ಶರಣ ಬಂಧುಗಳು ಸಾಕ್ಷಿಯಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401