ದಿನದ ಸುದ್ದಿ
ಶರಣ ತತ್ವ ದಾಸೋಹ ಪಸರಿಸಿದ ಶ್ರಾವಣ ಸಂಜೆಗಿಂದು ಹರಪನಹಳ್ಳಿಯಲ್ಲಿ ಸಮಾರೋಪ
ಸುದ್ದಿದಿನ ಡೆಸ್ಕ್ : ಕಳೆದೊಂದು ತಿಂಗಳಿನಿಂದ ಬಸವಾದಿ ಶರಣರ ಆಶಯಾಮೃತವನ್ನು ಕೊಟ್ಟರು ಮತ್ತು ಹರಪನಹಳ್ಳಿ ತಾಲ್ಲೂಕಿನಾದ್ಯಂತ ಉಣಬಡಿಸಿದ ವೈಚಾರಿಕ ಜ್ಞಾನ ದಾಸೋಹ ಅರ್ಥಪೂರ್ಣ ಕಾರ್ಯಕ್ರಮ ಎಂದೇ ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದ ಪರಮ ಪೂಜ್ಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ನೇತೃತ್ವದಿ ಜರುಗಿದ ಶ್ರಾವಣ ಸಂಜೆ ಕಾರ್ಯಕ್ರಮ ಇಂದು ಹರಪನಹಳ್ಳಿಯಲ್ಲಿ ಸಮಾರೋಪಗೊಳ್ಳಲಿದೆ.
ಹರಪನಹಳ್ಳಿಯ ಹಿರೇಮೇಗಳಗೇರಿ ಪಾಟೀಲ ಸಿದ್ಧನಗೌಡ ಕಾಲೇಜಿನ ಆವರಣದಲ್ಲಿ ಸಂಜೆ 5:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು. ಇಂದಿನ ಪಾವನ ಸಾನ್ನಿಧ್ಯವನ್ನು ಪರಮ ಪೂಜನೀಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, ಪಟ್ಟಾಧ್ಯಕ್ಷರು, ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಸಾಣೇಹಳ್ಳಿ ಹಾಗೂ ಹರಿಹರದ ಶ್ರೀ ಪಂಚಮಸಾಲಿ ಗುರು ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ವಹಿಸುವರು.
ಉಪನ್ಯಾಸ ಹಾಗೂ ನಾಟಕ ಪ್ರದರ್ಶನ
ವಿಶೇಷ ಉಪನ್ಯಾಸಕರಾಗಿ ಖ್ಯಾತ ರಂಗಕರ್ಮಿ,ಚಿಂತಕ ಹಾಗೂ ಹೋರಾಟಗಾರರು ಆದ ಹೆಗ್ಗೋಡಿನ ಪ್ರಸನ್ನ ರವರು ವಚನಕಾರರ ನಂಬಿಕೆ -ಮೂಡ ನಂಬಿಕೆ ಕುರಿತು ಉಪನ್ಯಾಸ ಮಂಡಿಸುವರು.ವಿಶೇಷ ಕಾರ್ಯಕ್ರಮವಾಗಿ
ಪರಮವೈರಾಗ್ಯ ನಿಧಿ ಅಕ್ಕ ಮಹಾದೇವಿ ನಾಟಕದ ಪ್ರದರ್ಶನವನ್ನೂ ಸಹ ಆಯೋಜಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401