ದಿನದ ಸುದ್ದಿ

ರಂಗ ಜಂಗಮ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮಾಜಮುಖಿ ಬದುಕಿಗೀಗ 67 ವಸಂತಗಳು

Published

on

ಓದಿದ್ದು ತತ್ವಶಾಸ್ತ್ರ,ಒಪ್ಪಿದ್ದು ವಚನಶಾಸ್ತ್ರ,ಅಪ್ಪಿದ್ದು ರಂಗಭೂಮಿ,ಸಾಂಸ್ಕೃತಿಕ ಲೋಕದ ರಂಗಜಂಗಮ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾರ್ಥಕ ಸಮಾಜಮುಖಿ ಬದುಕಿಗೆ 67 ವಸಂತಗಳು ತುಂಬಿದ ಸಂಭ್ರಮವೀಗ.

ರಂಗಜಂಗಮರೆಂದೆ ನಾಡಿನಾದ್ಯಂತ ಪ್ರಸಿದ್ಧರಾಗಿರುವ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ವೈಚಾರಿಕ ಬರಹಗಾರರು. ವಚನ ಸಾಹಿತ್ಯ ಮತ್ತು ವಚನಕಾರರ ಜೀವನಾದರ್ಶಗಳನ್ನು ರಂಗಭೂಮಿಯ ಮೂಲಕ ಜನಮನಕ್ಕೆ ಮುಟ್ಟಿಸುವ ಮಹಾಮಣಿಹದನೇತಾರರು. ಲೇಖಕರು, ನಾಟಕಕಾರು, ಆಧುನಿಕ ವಚನಕಾರರು, ಅಂಕಣಕಾರರು ಆಗಿರುವ ಪೂಜ್ಯರಿಂದ ಇದೂವರೆಶಿವಾಚಾರ ಹೆಚ್ಚು ಅಪೂರ್ವ ಸಾಹಿತ್ಯ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಗೊಂಡಿವೆ. ನೇರ ನಡೆನುಡಿಯ ಶ್ರೀಗಳು ಕುವೆಂಪು ವಿ ವಿಯ ಗೌರವಡಾಕ್ಟರೇಟ್, ಕರ್ನಾಟಕ ನಾಟಕ ಅಕಾಡೆಮಿ ಯ ಗೌರವ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕೆ ವಿ ಶಂಕರಗೌಡ ರಂಗ ಪ್ರಶಸ್ತಿ, ರಮಣಶ್ರೀ ಪ್ರಶಸ್ತಿ, ದುಬೈ ಕನ್ನಡಿಗರ ಧ್ವನಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವಗಳಿಗೆ ಭಾಜನರು.

ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ, ಅಕಾಡೆಮಿ ಪುರಸ್ಕಾರಕ್ಕೆ ಪಾತ್ರರಾದ ಮೊದಲ ಮಠಾಧಿಪತಿಗಳು. ಆಧುನಿಕ ಕನ್ನಡ ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿರುವ ಶ್ರೀ ಗಳು ಶಿವಸಂಚಾರ ಎಂಬ ರೆಪರ್ಟರಿ ಮೂಲಕ ತಮ್ಮ ಕಾರ್ಯಕ್ಷೇತ್ರವಾದ ಸಾಣೇಹಳ್ಳಿಯನ್ನು ಕರ್ನಾಟಕದ ರಂಗಕಾಶಿಯನ್ನಾಗಿಸಿದ್ದಾರೆ. ಶಿವಶರಣರ ಕನ್ನಡ ನಾಟಕಗಳನ್ನು ಹಿಂದಿಗೆ ಅನುವಾದಿಸಿ ಭಾರತದ ಪ್ರಸಿದ್ಧ ನಗರಗಳಲ್ಲಿ “ಭಾರತ ಸಂಚಾರ” ಮತ್ತು ಶಿವದೇಶ ಸಂಚಾರ” ಎಂಬ ರಂಗ ಯಾತ್ರೆಯ ಮೂಲಕ ಹೊರನಾಡಿನಲ್ಲೂ ವಚನಕಾರರ ಪರಿಚಯ ಮಾಡಿಸಿರುವ ಕೀರ್ತಿ ಪೂಜ್ಯರದ್ದು. ಹೀಗೆ ಹಲವು ಪ್ರಥಮ ಗಳನ್ನು ಸಾಧಿಸಿರುವ ಪೂಜ್ಯರು ಇಂದು ೬೭ನೆಯ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಂತಹ ಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version