ದಿನದ ಸುದ್ದಿ

ನಮ್ಮ ಮಠದ ಭಕ್ತರು ಕೊಡುಗೈ ದಾನಿಗಳು; ಸಿರಿಗೆರೆ ತರಳಬಾಳು ಶ್ರೀಗಳ ಹೇಳಿಕೆ

Published

on

ಸುದ್ದಿದಿನ ದಾವಣಗೆರೆ: ಭಕ್ತಿ, ಶ್ರದ್ಧೆ, ನಿಷ್ಠೆಯಲ್ಲಿ ನಮ್ಮ ಮಠದ ಶಿಷ್ಯರು ಅತಿ ಶ್ರೀಮಂತರು. ಬೇರೆ ಮಠಾಧೀಶರು ಅಸೂಯೆ ಪಡುವಷ್ಟರ ಮಟ್ಟಿಗೆ ಶಿಷ್ಯರು ಮಠಕ್ಕೆ ದಾನ ಮಾಡುತ್ತಾರೆ. ಕೊಡುವುದರಲ್ಲಿ ಎತ್ತಿದ ಕೈ ಶ್ರೀಮಠದ ಭಕ್ತರದು ಎಂದು ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಅಕ್ಕಿ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ದಾನ ಮಾಡಿದರೆ ನಮಗೇನು ಸಿಗುತ್ತದೆ ಎಂದು ಯೋಚನೆ ಮಾಡುವುರೇ ಹೆಚ್ಚು ಜನರಿದ್ದಾರೆ. ಆದರೆ, ನಮ್ಮ ಮಠದ ಭಕ್ತರು ಈ ರೀತಿ ಎಂದಿಗೂ ಯೋಚನೆ ಮಾಡದೇ ನಮ್ಮ ನಾವೇನು ಕೊಡುತ್ತೇವೆ ಎಂದು ಭಕ್ತಿ ಭಾವದಿಂದ ಕೊಡುತ್ತಿರುವುದು ಮೆಚ್ಚುಗೆಯ ವಿಚಾರ ಎಂದು ಶ್ರೀಗಳು ಶ್ಲಾಘನೆ ವ್ಯಕ್ತಪಡಿಸಿದರು.

ಹಣವಿರುವ ಮಠಗಳು ಬೇಕಾದಷ್ಟಿವೆ. ಆದರೆ, ಅವರಷ್ಟು ಹಣವಿರದಿದ್ದರೂ ನಮ್ಮ ಮಠ ಎಲ್ಲಾ ಮಠಗಳಿಗಿಂತ ಶ್ರೀಮಂತ ಮಠ. ಮಠದ ಭಕ್ತರ ಮೊದಲಿದ್ದ ಹೆಂಚಿನ ಮನೆಗಳು ಬೃಹತ್ ಬಂಗಲೆಗಳಾಗಿವೆ, ಕಾರುಗಳಿವೆ. ಇಂತಹ ಅಭಿವೃದ್ಧಿ ನೋಡಿದಾಗ ಹೆಮ್ಮೆ ಎನಿಸುತದೆ. ಶಿಷ್ಯರ ಎಲ್ಲಾ ಆಸ್ತಿಯು ಮಠದ ಆಸ್ತಿಯೇ, ನೀವೆಲ್ಲಾ ನಮ್ಮ ಮಠ ಎಂದು ಹೇಗೆ ಹೇಳುವಿರೋ ಹಾಗೆಯೇ ನಾವೂ ಸಹ ನಮ್ಮ ಶಿಷ್ಯರು ಎನ್ನುತ್ತೇವೆ. ಗುರು-ಶಿಷ್ಯರ ಬಾಂಧವ್ಯ ಈ ರೀತಿ ಅನ್ಯೋನ್ಯವಾಗಿರುವುದು ಬಹಳ ಅಪರೂಪ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version