ದಿನದ ಸುದ್ದಿ
ಗೆದ್ದಲು ಹುಳುಗಳಿಗೆ ಆಹಾರವಾಗಿರುವ ಲಕ್ಷಾಂತರ ರೂಪಾಯಿ ಮೌಲ್ಯದ ತೇಗದ ಮರಗಳು
ಸುದ್ದಿದಿನ ಡೆಸ್ಕ್ : ಮದ್ಧೂರು ಪೋಲೀಸ್ ಠಾಣೆಯ ಆವರಣದಲ್ಲಿ ದಾಸ್ತಾನು ಮಾಡಿರುವ ಅಂದಾಜು 80 ಲಕ್ಷ ರೂಪಾಯಿ ಮೌಲ್ಯದ ತೇಗದ ಮರಗಳು ಗೆದ್ದಲು ಹುಳುಗಳಿಗೆ ಆಹಾರವಾಗಿದ್ದು ಅಧಿಕಾರಿಗಳು ನಿರ್ಲಕ್ಷ್ಯ ತನದಿಂದ ಅನಾಥವಾಗಿವೆ.
ಕಳೆದ ಒಂದು ವರ್ಷದ ಹಿಂದೆ ಬೆಸಗರಹಳ್ಳಿ ,ಮಳವಳ್ಳಿ,ಕಿರುಗಾವಲು,ಮಂಡ್ಯ,ಬೆಳವಾಡಿ,ಶಿವಳ್ಳಿ, ಕೆರಗೋಡು, ಠಾಣೆಗಳಲ್ಲಿ ಮರ ಕಳ್ಳತನದ ಬಗ್ಗೆ 11ಪ್ರಕರಣಗಳು ದಾಖಲು ಮಾಡಲಾಗಿತ್ತು ಈ ಆರೋಪಿಗಳನ್ನು ಪತ್ತೆ ಹಚ್ಚಲು ಸಿ.ಪಿ.ಐ.ಪ್ರಬಾಕರ್ ಸಂಚಾರ ಪಿ.ಎಸ್.ಐ.ಗಳಾದ ಸಂತೋಷ್ , ಕುಮಾರ್ , ಮಂಜೇಗೌಡ, ಎ.ಎಸ್.ಐ.ಮಹದೇವಪ್ಪ ಮತ್ತು ಪೋಲೀಸ್ ಸಿಬ್ಬಂದಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು ಆರೋಪಿಗಳಾದ ರಾಮಕೃಷ್ಣ, ಸಿದ್ದರಾಜು,ಚಲುವ, ನಂದೀಶ್,ಆಶಿಷ್ ಪಾಷಾ,ಸಯ್ಯದ್ , ಫೈಯಾಜ್ ,ರೆಹಮ್ಮದ್ , ರವರನ್ನು ಬಂಧಿಸಿದ್ದರು
ಆದರೆ ಒಂದು ವರ್ಷದಿಂದ ಪೋಲೀಸ್ ಇಲಾಖೆಯಾಗಲಿ ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಅತೀ ಜರೂರಾಗಿ ಮೇಲಾದಿಕಾರಿಗಳ ಅನುಮತಿ ಪಡೆದು ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401