ದಿನದ ಸುದ್ದಿ
ಚನ್ನಗಿರಿ | ಕುಟುಂಬಸ್ಥರ ಜಮೀನು ವ್ಯಾಜ್ಯ ; ‘ನ್ಯಾಯ ಕೊಡಿ ಇಲ್ಲಾ ವಿಷ ಕೊಡಿ’ : ತೇಜಸ್ವಿ ಪಟೀಲ್ ನೇತೃತ್ವದಲ್ಲಿ ಪ್ರತಿಭಟನೆ
ಸುದ್ದಿದಿನ,ಚನ್ನಗಿರಿ : ತಾಲೂಕಿನ ಎಕ್ಕೆಗೊಂದಿ ಗ್ರಾಮದ ಪದ್ಮಾವತಿ ಕೋಂ ಲೇಟ್ ಪ್ರಕಾಶ್ ರವರ 28.32 ಎ. ಗುಂ. ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಯನ್ನು ಕುಟುಂಬದ ಇತರ ಸದಸ್ಯರು ಜನರನ್ನ ಗುಂಪುಕಟ್ಟಿಕೊಂಡು ದೌರ್ಜನ್ಯದಿಂದ ಬೆಳೆ ಕಟಾವು ಮಾಡಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಪೋಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದರೂ ರಕ್ಷಣೆ ಸಿಕ್ಕಿರುವುದಿಲ್ಲ.
ಸೋಮವಾರ ಇದನ್ನು ವಿರೋಧಿಸಿ ಸಂತೇಬೆನ್ನೂರಿನ ನಾಡಕಚೇರಿ ಮುಂಭಾಗದಲ್ಲಿ ಜಿಪಂ ಸದಸ್ಯರು ಹಾಗೂ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷರಾದ ತೇಜಸ್ವೀ ಪಾಟೀಲ್ ನೇತೃತ್ವದಲ್ಲಿ ‘ನ್ಯಾಯಕೊಡಿ ಇಲ್ಲಾ ವಿಷಕೊಡಿ’ ಎಂದು ಚಳುವಳಿಯನ್ನು ಕಬ್ಬು ಬೆಳೆಗಾರರ ಸಂಘ , ರೈತ ಸಂಘ, ಹಾಗೂ ದಸಂಸ ಸಹಯೋಗದಲ್ಲಿ ಧರಣಿ ಸತ್ಯಗ್ರಹವನ್ನು ನಡೆಸಲಾಯಿತು.
ಧರಣಿಯನ್ನುಧ್ಧೇಶಿಸಿ ಮಾತನಾಡಿದ ರೈತಮುಖಂಡ ಹಾಗೂ ಜಿಪಂ ಸದಸ್ಯರಾದ ತೇಜಸ್ವೀ ಪಾಟೀಲ್ ಪದ್ಮಾವತಿ ವಿಧವೆ ಮಹಿಳೆಯಾಗಿದ್ದು 2 ಜನ ಹೆಣ್ಣು ಮಕ್ಕಳನ್ನು ಹೊಂದಿರುತ್ತಾರೆ . ಇವರು ನ್ಯಾಯಕ್ಕಾಗಿ ಕಚೇರಿಯನ್ನು ಅಲೆದು ಸಾಕಾಗಿದೆ ಇವರಿಗೆ ನ್ಯಾಯ ಕೊಡಿ ಇಲ್ಲಾ ವಿಷಕೊಡಿ ನ್ಯಾಯಲಯದ ಆದೇಶವನ್ನು ನೆಪಮಾಡಿಕೊಳ್ಳದೆ ಕಾನೂನನ್ನು ಸರಿಯಾಗಿ ಪಾಲನೆ ಮಾಡಿ ನೊಂದ ವಿಧವೆ ಮಹಿಳೆಗೆ ನ್ಯಾಯದೊರಕಿಸಿಕೊಡಿ ಎಂದರು.
ಇವರ ಕಟುಂಬದ ಸದಸ್ಯರ ಜಮೀನು ವ್ಯಾಜ್ಯವು ನ್ಯಾಯಲಯದಲ್ಲಿದ್ದು, ಪೋಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಸಮಕ್ಷಮ ಜಮೀನಿನಲ್ಲಿ ಹತ್ತಿ,ಹಾಗೂ ಮೆಕ್ಕೆಜೋಳ ಬಿತ್ತನೆ ಮಾಡಿ ಪಸಲನ್ನು ಕುಟುಂಬದ ಇತರೆ ಸದಸ್ಯರು ದೌರ್ಜನ್ಯದಿಂದ ಜನರ ಗುಂಪುಕಟ್ಟಿಕೊಂಡು ಬೆಳೆದ ಬೆಳೆಯನ್ನು ಕಟಾವು ಮಾಡಿರುವುದು ಅಧಿಕಾರಿಗಳ ನಿರ್ಲಕ್ಷತನ ಎದ್ದು ಕಾಣುತಿದೆ ಆದ್ದರಿಂದ ಅಧಿಕಾರಿಗಳ ಕರ್ತವ್ಯೆಲೋಪದ ಮೇಲೆ ಕ್ರಮಕ್ಕೆ ಒತ್ತಾಯಿಸಲಾಗುವುದೆಂದರು.
ಧರಣಿ ಸ್ಥಳಕ್ಕೆ ತಾಲೂಕ್ ದಂಡಾಧೀಕಾರಿಗಳಾದ ಪಟ್ಟರಾಜ ಗೌಡ ಹಾಗೂ ಸಂತೇಬೆನ್ನೂರು ಆರಕ್ಷಕ ಉಪನೀರಿಕ್ಷಕರಾದ ಶಿವರುದ್ರಪ್ಪ ಎಸ್ ಮೇಟಿ ಆಗಮಿಸಿ ಕೆಲಕಾಲ ಧರಣಿ ನಿರತರೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಸಿಗಬಹುದಾದ ಮಾರ್ಗಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜಮೀನು ವ್ಯಾಜ್ಯವು ನ್ಯಾಯಲಯದಲ್ಲಿರುವಾಗ ನಾವುಗಳು ಯಾವುದೇ ಕ್ರಮ ತಗೆದುಕೊಳ್ಳುಲು ಆಗುವುದಿಲ್ಲಾ ನ್ಯಾಯಲಯದ ತೀರ್ಪು ಬರುವವರೆಗೆ ಕಾದುನೋಡಬೇಕಿದೆ ಎಂದರು.
ಧರಣಿಯಲ್ಲಿ ಪದ್ಮಾವತಿ ಕಟುಂದಬ ಸದಸ್ಯರು ಹಾಗೂ ಸಂಘಟನೆಗಳ ಮುಖಂಡರಾದ ಅಜ್ಜಪ್ಪ ,ಬೆಳಲಗೆರೆ ,ಚನ್ನಬಸಪ್ಪ , ಶಿವಲಿಂಗಸ್ವಾಮಿ ,ಅಂಬೊಜೀರಾವ್ ಕಣಿವೆಬಿಳಚಿ, ಚಿತ್ರಪ್ಪ , ಗೋವಿಂದಸ್ವಾಮಿ , ರಘು ಇನ್ನಿತರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243