ರಾಜಕೀಯ
ಕುಮಾರಸ್ವಾಮಿಗೆ ಕುರ್ಚಿ ಮುಖ್ಯ: ತೇಜಸ್ವಿನಿ ಕಿಡಿ
ಸುದ್ದಿದಿನ, ದಾವಣಗೆರೆ : ಸಿಎಂ ಕುಮಾರಸ್ವಾಮಿ ಅವರು ಕುರ್ಚಿಗೋಸ್ಕರ ಏನು ಬೇಕಾದರು ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಆಪಾದಿಸಿದ್ದಾರೆ. ರೈತರು ಕಷ್ಟದಲ್ಲಿದ್ದಾರೆ. ಸಿಎಂಗೆ ಅದರ ಪರಿವೇ ಇಲ್ಲ. ಕುಮಾರಸ್ಚಾಮಿ ಅವರ ಮುಖವಾಡ ಕಳಚುವ ಕೆಲಸವನ್ನು ರಾಜ್ಯದ ಜನಮಾಡುತ್ತಾರೆ ಎಂದು ದೂರಿದ್ದಾರೆ.
ಹರಿಹರ ಸಮೀಪದ ಕಾಗಿನೆಲೆ ಗುರುಪೀಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ್ದಾರೆ.
ವಚನಭ್ರಷ್ಟತೆ ಲ, ಅವಕಾಶವಾದಿತನಕ್ಕೆ ಸಿಎಂ ಕುಮಾರಸ್ವಾಮಿ ಹೆಸರು. 24 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದು, ಈಗ ಮಾತು ತಪ್ಪಿದ್ದಾರೆ ಎಂದು ಕಿಡಿಕಾರಿದ್ದಾರೆ.