ದಿನದ ಸುದ್ದಿ
ವಿಡಿಯೋ | ಹಸಿವು ತಾಳಲಾರದೆ ಮಣ್ಣು ತಿಂದು ಇಬ್ಬರು ಮಕ್ಕಳು ಸಾವು
ಸುದ್ದಿದಿನ,ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿ ಮೂಲದ ಇಬ್ಬರು ಮಕ್ಕಳು ಹಸಿವು ತಾಳಲಾರದೆ ಮಣ್ಣು ತಿಂದು ಸಾವನ್ನಪ್ಪಿದ ಘಟನೆ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಮ್ಮಾರವಂಡಲಪಲ್ಲೆ ಗ್ರಾಮದಲ್ಲಿ ನಡೆದಿದೆ.
ಬಾಗೇಪಲ್ಲಿ ಮೂಲದ ಮಹೇಶ್ ಹಾಗೂ ನಾಗಮಣಿ ದಂಪತಿ. ಕೂಲಿ ಕೆಲಸವನ್ನರಸಿ ಆಂಧ್ರಪ್ರದೇಶಕ್ಕೆ ತೆರಳಿ, ಅಲ್ಲಿ ಸಣ್ಣ ಗುಡಿಸಲು ನಿರ್ಮಾಣ ಮಾಡಿ ವಾಸವಾಗಿದ್ದರು. ಸಾವನ್ನಪ್ಪಿದ ಮಗುವಿನ ತಾಯಿ ನಾಗಮಣಿ, ಪತಿ ಮಹೇಶ್ ಸೇರಿದಂತೆ ಕುಟುಂಬದ ಎಲ್ಲರೂ ಕುಡುಕರಾಗಿದ್ದು, ಕೂಲಿ ಕೆಲಸದ ಸಮಯದಲ್ಲಿ ಮಕ್ಕಳನ್ನು ಅಜ್ಜಿಯ ಬಳಿ ಬಿಟ್ಟು ಹೋಗುತ್ತಿದ್ದರು ಎಂದು ಹೇಳಲಾಗಿದೆ.
ಇನ್ನು ಮೂವರೂ ಕುಡುಕರಾಗಿದ್ದ ಕಾರಣ, ಯಾರೂ ಮಕ್ಕಳಿಗೆ ಸರಿಯಾಗಿ ಆಹಾರವನ್ನು ನೀಡುತ್ತಿರಲಿಲ್ಲ. ಹೀಗಾಗಿಯೇ ಕಳೆದ 6 ತಿಂಗಳ ಹಿಂದೆ ಸಂತೋಷ್ ಎಂಬ ಪುಟ್ಟ ಮಗು ಮಣ್ಣು ತಿಂದು ಸಾವನ್ನಪ್ಪಿತ್ತು. ಆದರೆ ಈ ವಿಷಯ ಯಾರಿಗೂ ತಿಳಿಯದಂತೆ ಎಲ್ಲರೂ ಸೇರಿ ಮಗುವನ್ನು ಹೂತುಹಾಕಿದ್ದರು.
ಆದರೆ ಈಗ ನಾಗಮಣಿಯ ಸೋದರಿಯ ಮಗ ವೆನ್ನಲಾ ಕೂಡ ಹಸಿವು ತಾಳಲಾರದೆ ಮಣ್ಣು ತಿಂದು ಸಾವನ್ನಪ್ಪಿದ್ದಾನೆ. ಈ ವೇಳೆ ಒಂದು ವರ್ಷದ ಹಿಂದೆ ಮಗಳು ಸಹ ಸಾವನ್ನಪ್ಪಿರುವುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ವಿಷಯ ತಿಳಿದ ಅಧಿಕಾರಿಗಳು ಈ ದಂಪತಿ ಜೊತೆಗಿದ್ದ ಉಳಿದ ಮಕ್ಕಳನ್ನು ಸಮೀಪದ ಅಂಗನವಾಡಿ ಕೇಂದ್ರಕ್ಕೆ ಸೇರಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ವರದಿ : ಸೈಯದ್ ಅಸ್ಲಾಂ ಪಾಷಾ
ವರದಿ ಕೃಪೆ : jagrutinews
ವಿಡಿಯೋ
ಸುದ್ದಿದಿನ.ಕಾಂ|ವಾಟ್ಸಾಪ್|9980346243