ದಿನದ ಸುದ್ದಿ
ಸರ್ಕಾರ ಕೊಡಗಿನ ಜನತೆ ಜೊತೆಗಿದೆ | ಜಿ.ಪರಮೇಶ್ವರ್
ಸುದ್ದಿದಿನ, ಮಡಿಕೇರಿ | ಕುಶಾಲನಗರ, ಸುಂಟಿಕೊಪ್ಪ ಹಾಗೂ ನಗರದ ಪ್ರಕೃತಿ ವಿಕೋಪ ಪ್ರದೇಶ ಮತ್ತು ಪರಿಹಾರ ಕೇಂದ್ರ ಮೈತ್ರಿ ಭವನಕ್ಕೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಸೋಮವಾರ ಭೇಟಿ ನೀಡಿ ಸಂತ್ರಸ್ಥರಿಗೆ ಧೈರ್ಯ ತುಂಬಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿ ಅವರು ಬಿಬಿಎಂಪಿ, ಬಿಡಿಎ ಮತ್ತು ಬೆಂಗಳೂರು ಒಳಚರಂಡಿ ಮಂಡಳಿ ವತಿಯಿಂದ ಒಟ್ಟು 5 ಕೋಟಿ ರೂ. ಸಂತ್ರಸ್ಥರಿಗೆ ನೀಡಲಾಗುತ್ತದೆ. ಇದರಲ್ಲಿ ಒಂದು ಕೋಟಿ ರೂ ಕೇರಳ ರಾಜ್ಯಕ್ಕೆ ನೀಡಲಾಗುತ್ತದೆ. ಜೊತೆಗೆ ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಒಂದು ದಿನದ ವೇತನ ನೀಡಲಿದ್ದಾರೆ ಎಂದು ಗೃಹ ಸಚಿವರಾದ ಜಿ.ಪರಮೇಶ್ವರ ಅವರು ತಿಳಿಸಿದರು.
ಪ್ರಕೃತಿ ವಿಕೋಪಕ್ಕೆ ತುತ್ತಾಗಿ 7 ಮಂದಿ ಮೃತಪಟ್ಟಿದ್ದಾರೆ. 4 ಮಂದಿ ಕಾಣೆಯಾಗಿದ್ದಾರೆ. ಇಡೀ ಸರ್ಕಾರ ಕೊಡಗಿನ ಜನತೆಯ ಜೊತೆಗಿದೆ ಎಂದು ಉಪ ಮುಖ್ಯಮಂತ್ರಿ ಅವರು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್, ಶಾಸಕರಾದ ಸೋಮಶೇಖರ ಇತರರು ಇದ್ದರು.
ಸುದ್ದಿದಿನ.ಕಾಂ | ವಾಟ್ಸಾಪ್ | 9986715401