ದಿನದ ಸುದ್ದಿ
ಕೊರೋನಾ ತಂದಿಟ್ಟ ಸಂಕಷ್ಟ
- ವನಜ ತಿಪ್ಪಣ್ಣ ಪೂಜಾರಿ, ಮಾನ್ವಿ, ರಾಯಚೂರು
ಮನುಷ್ಯ ಭೂಮಿಯ ಪ್ರತಿಯೊಂದು ಜೀವ ಸಂಕುಲ ವನ್ನು ಅರ್ಥೈಸಿಕೊಂಡು, ಅನುಸರಿಸಿಕೊಂಡು ನಡೆಯುತ್ತಿರುವ ಜೀವಸಂಕುಲ.ಇಂತಹ ಮನುಷ್ಯ ಜೀವ ಸಂಕುಲವನ್ನು ಬಿಟ್ಟುಬಿಡದೆ ಕಾಡುತ್ತಿರುವುದು ಕಣ್ಣಿಗೆ ಕಾಣದ ಕೊರೋನಾ ಎಂಬ ವೈರಾಣು.
ಕೊರೋನಾ ಎಂದಾಕ್ಷಣ ಎಂತಹ ಮನುಷ್ಯರಾಗಲಿ ಸಿರಿವಂತರು, ಬಡವರು, ಕೆಟ್ಟವರು, ಒಳ್ಳೆಯವರು, ಬುದ್ದಿವಂತರು, ಬುದ್ದಿಹೀನರು ಎಲ್ಲರೂ ಒಂದು ಕ್ಷಣ ಬೆಚ್ಚಿ ಬೀಳಿಸುವಂತಹ ಆತಂಕವಾಗಿದೆ.
ಒಂದು ವರ್ಷದ ಹಿಂದೆ ಇದೇ ಸಮಯದಲ್ಲಿ ಪ್ರಪಂಚದ ಎಲ್ಲಾ ಜನರ ದಿನದ ಸ್ಥಿತಿಗತಿ, ವ್ಯಾಪಾರ ವಹಿವಾಟು, ಮಕ್ಕಳ ವಿದ್ಯಾಭ್ಯಾಸ ವನ್ನು ಅಸ್ತವ್ಯಸ್ತ ಮಾಡಿದ ಕೊರೋನಾ ಇಂದು ಕೂಡ ಮತ್ತೆ ಅದೇ ಸ್ಥಿತಿ ಮರುಕಳಿಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.
ಮಕ್ಕಳು ಮನೆಯಲ್ಲಿಯೇ ಕುಳಿತು ವಿದ್ಯಾಭಾಸ ಮಾಡಲು ಸಿರಿವಂತ ಮಕ್ಕಳಿಗೆ ಅನುಕೂಲ ಇದ್ದು., ಬಡ ಮಕ್ಕಳಿಗೆ ಅಸ್ತವ್ಯಸ್ತ ವಾಯಿತು ವಿದ್ಯಾಭ್ಯಾಸ ದಿಂದ ವಂಚಿತರಾಗಿ ಹಸಿವು ನೀಗಿಸುವುದಕ್ಕೆ ಹಳ್ಳಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸಿದರು. ಇನ್ನು ಐಟಿ -ಬಿಟಿ ಕಂಪನಿಯ ಉದ್ಯೋಗಿಗಳು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವುದನ್ನು ರೂಪಿಸಿಕೊಂಡರು.
ಕೂಲಿಕಾರ್ಮಿಕರು ಮಾಡಲು ಕೆಲಸ ಇಲ್ಲದೆ ಹೊಟ್ಟೆಗೆ ಊಟ ಇಲ್ಲದೆ ಸ್ವಂತ ಗ್ರಾಮಗಳಿಗೆ ವಲಸೆ ಸಾಗಿ ಮರಳಿ ಬಂದು ಈಗ ಮತ್ತೆ ಮರುವಲಸೆ ಮಾಡುತ್ತಿದ್ದಾರೆ. ಇವರೆಲ್ಲರ ನಡುವೆ ನಿರಂತರವಾಗಿ ನಿಷ್ಠೆ ಯಿಂದ ಕೆಲಸ ಮಾಡುತ್ತಿರುವವರು ವೈದ್ಯರು, ಆರಕ್ಷಕರು ಮತ್ತು ಸಮಾಜ ಸೇವಕರು. ಕಷ್ಟ ಎಂದವರ ಕೈ ಹಿಡಿದು ನಡೆಸಿದವರು ಈ ನಮ್ಮ ಕೊರೋನಾ ವಾರಿಯರ್ಸ್.
ಇವರಲ್ಲಿಯೂ ಎಷ್ಟೋ ಜನ ಬೇರೆಯವರ ಹಿತಕ್ಕಾಗಿ ತಮ್ಮ ಜೀವ ತ್ಯಜಿಸಿದ್ದಾರೆ. ಮನೆಯ ಹಾಗು ಕುಟುಂಬದ ಜವಾಬ್ದಾರಿ ವಹಿಸಿದ ಅಪ್ಪ, ಕುಟುಂಬ ನಿರ್ವಹಣೆ ಮಾಡುತ್ತಿದ್ದ ಅಮ್ಮ,ಮನೆಯಿಂದ ದೂರದ ಊರಲ್ಲಿ ಕೆಲಸ ಮಾಡಿ ಮನೆ ನಿರ್ವಹಿಸುತ್ತಿದ್ದ ಅಣ್ಣಾ ತಮ್ಮ, ಹೀಗೆ ನಾವು ನಮ್ಮವರನ್ನು ನಿರಾಸಕ್ತಿಯಿಂದ, ಅಸಡ್ಡೆಯಿಂದ ಭೇಜವಾಬ್ದಾರಿಯಿಂದ ಕಳೆದುಕೊಂಡಿದ್ದೀವಿ.
ಇನ್ನು ಮುಂದೆ ಆದರೂ ಎಚ್ಚರಿಕೆಯಿಂದ ಮಾಸ್ಕ್ ಧರಸಿ, ವ್ಯಕ್ತಿಗತ ಅಂತರ ಕಾಪಾಡಿಕೊಂಡು, ಶುದ್ಧ ಆಹಾರ ಸೇವಿಸಿ, ಸ್ವಚ್ಛತೆ ಕಾಪಾಡಿಕೊಂಡು ನಮ್ಮನ್ನು ನಮ್ಮವರನ್ನು ಕಾಪಾಡಿಕೊಳ್ಳೋಣ. ಜೈ ಹಿಂದ್ ಜೈ ಭಾರತ್ ಮಾತಾ…!!
ಸುದ್ದಿದಿನ.ಕಾಂ|ವಾಟ್ಸಾಪ್|9980346243