ಅಂಕಣ
ಜಗತ್ತಿನ ಅಪಾಯಕಾರಿ ಜೀವಿ..!?
~ ಹೆಚ್.ಕೆ.ಕೃಷ್ಣ ಅರಕೆರೆ
ಭೂಮಿಮೇಲಿನ ಕೋಟ್ಯಾಂತರ ಜೀವರಾಶಿಗಳಲ್ಲಿ ಮನುಷ್ಯನು ಸಹ ಒಬ್ಬ ಜೀವಿ, ಮನುಷ್ಯನಂತೆಯೇ ಇಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳಿಗೂ ಭೂಮಿಯಮೇಲೆ ಬದುಕುವ ಸಮಾನ ಹಕ್ಕಿದೆ.
ಮನುಷ್ಯ ಸೃಷ್ಠಿಯ ಎಲ್ಲಾ ಜೀವಿಗಳಿಗಿಂತ ಅಂತ್ಯಂತ ಬುದ್ಧಿವಂತ , ಮನುಷ್ಯನಿಗೆ ಭೂಮಿಮೇಲಿನ ಯಾವ ಜೀವಿಗಳಿಗೂ ಇಲ್ಲದ ಬುದ್ಧಿವಂತಿಕೆ, ಮತ್ತು ಆಲೋಚನ ಶಕ್ತಿಯನ್ನ ಪ್ರಕೃತಿ ನೀಡಿದೆ , ಇದನ್ನ ಬಳಸಿಕೊಂಡ ಮನುಷ್ಯ ತನ್ನ ಜ್ಞಾನ ವಿಕಾಶಗೊಂಡಂತೆ ಪ್ರಕೃತಿಯ ವಿಷ್ಮಯಗಳನ್ನ ಬೇಧಿಸಲು ಹವಣಿಸುತ್ತಿದ್ದಾನೆ.
ಅವನ ಸಾಧನೆ ಕೃತಕ ಮಾನವನ ಸೃಷ್ಠಿಯಿಂದ ಹಿಡಿದು ಆಕಾಶಕ್ಕೆ ಚಿಮ್ಮಿ, ಸಮುದ್ರದ ಆಳಕ್ಕೆ ಇಳಿದು ಸಂಶೋಧನೆ ನಡೆಸುವುದರ ಜೊತೆಗೆ ಪ್ರಪಂಚದ ಎಲ್ಲಿ ಜೀವರಾಶಿಗಳನ್ನ ಪ್ರಕೃತಿ ಸಂಪತ್ತನ್ನ ಕ್ಷಣಮಾತ್ರದಲ್ಲಿ ನಾಶಮಾಡಬಲ್ಲ ಅಸ್ತ್ರಗಳಂತಹ ಅಪಾಯಕಾರಿ ಆಯುದಗಳನ್ನ ತಯಯಾರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ.
ವಿಕಾಶಗೊಂಡ ಮಾನವ ಸೃಷ್ಠಿಯ ಸಕಲ ಜೀವರಾಶಿಗಳಲ್ಲೇ ಅತ್ಯಂತ ಶ್ರೇಷ್ಟ ಬದುಕನ್ನ ನಡೆಸಲು ಅವಕಾಶಮಾಡಿಕೊಟ್ಟಿರುವ ಪ್ರಕೃತಿಯನ್ನ ನಾಶಮಾಡುವ ಸಂಶೋಧನೆ ಅದು ಮನುಷ್ಯನ ವಿಕೃತಿ ಮತ್ತು ಅವನ ಅತ್ಯಂತ ಅಪಾಯಕಾರಿ ಕೆಟ್ಟತನಕ್ಕೆ ಸಾಕ್ಷಿಯಾಗಿದೆ . ಬದುಕುವುದಕ್ಕೆ ಮದ್ದುಗುಂಡುಗಳು ಬೇಕೆ..?
ಕೇವಲ ಕೆಲವು ಸಾವಿರ ವರ್ಷಗಳಲ್ಲಿಯೇ ಇಷ್ಟೆಲ್ಲ ಸಾಧಿಸಿರುವ ಮನುಷ್ಯ ಪ್ರಕೃತಿಯ ಮುಂದೆ ಅವನು ಕುಬ್ಜ ಎನ್ನುವ ಸತ್ಯವನ್ನ ಮರೆತಿದ್ದಾನೆ,ಅಥವ ಅದನ್ನ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅವನಿಲ್ಲ , ಅವನ ಮುಂದಿರುವ ಗುರಿ ಒಂದೇ, ಇಡೀ ಜಗತ್ತೆ ನಾಶವಾದರು ಸರಿ, ಅವನು ಗೆಲ್ಲಬೇಕು ಮುಂದೊಂದು ದಿನ ಅವನೇ ಉಳಿಯದಿದ್ದರು ಸರಿ ಅವನು ಗೆಲ್ಲಲೇ ಬೇಕು. ಹಾಗಾದರೆ ಪ್ರಪಂಚವನ್ನೆ ಗೆಲ್ಲಲು ಹೊರಟವನಿಗೆ ಒಂದು ನೊಣದಂತ ಸಣ್ಣ ಕೀಟಜೀವಿಯನ್ನ ಗೆಲ್ಲಲು ಸಾದ್ಯವೇ..?
ಒಂದು ದಿನ ಜಗತ್ತಿನ್ನೆ ಗೆಲ್ಲುವೆನೆಂದು ವಿಶ್ವನಾಶದ ಆಯುಧಗಳನ್ನ ಉಡಾವಣೆಗೆ ಸಿದ್ದಮಾಡಿಕೊಂಡು ಮನುಷ್ಯನೊಬ್ಬ ಇನ್ನು ಸ್ವಲ್ಪ ಕ್ಷಣದಲ್ಲೆ ಎಲ್ಲರನ್ನು, ಎಲ್ಲವನ್ನು ನಾನು ನಾಶಮಾಡಿಬಿಡುವೆ ಎಂದು ಕುಳಿತಿದ್ದಾನೆ, ಇಡೀ ಜಗತ್ತೇ ಈ ಕ್ಷಣ ನನ್ನ ಕೈ ಬೆರಳಿನಲ್ಲಿದೆ ಈ ಜಗತ್ತಿನ ಅಳಿವು ಉಳಿವು ನಾನೇ ಎನ್ನುವ ಜಂಬ, ಅಹಂಕಾರ, ಗರ್ವ ಏನೇಲ್ಲ ಹೇಳಬಹುದೋ ಅದೆಲ್ಲವು ಅವನಲ್ಲಿದೆ, ಹಾಗಲೇ ಒಂದು ಚಿಕ್ಕ ನೊಣವೂಂದು ಅವನ ಕಿವಿಯ ಬಳಿ ಬಂದು ಗುಯ್ ಗುಟ್ಟುತ್ತಿದೆ, ಒಮ್ಮೆ ಮತ್ತೊಮ್ಮೆ ಓಡಿಸುತ್ತಾನೆ, ಅದು ಹಠಕ್ಕೆ ಬಿದ್ದಂತೆ ಮತ್ತೆ ಮತ್ತೆ ಬಂದು ಗುಯ್ ಗುಟ್ಟಲು ಪ್ರಾರಂಬಿಸುತ್ತದೆ ಅದನ್ನ ಎದುರಿಸಲು, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅವನಿಗೆ ಅದೆಷ್ಟು ಸಿಟ್ಟು, ಕೋಪ , ಅಸಹನೆ ಬಂದು ಬಿಡುತ್ತದೆಂದರೆ ಜಗತ್ತನ್ನೆ ಗೆಲ್ಲಬಲ್ಲೆ ಅಂದುಕೊಂಡವನಿಗೆ ನೊಣವನ್ನು ಗೆಲ್ಲಲಾಗದಿರುವ ಸ್ಥಿತಿ, ಇಂತಹ ಅನುಬವಗಳು ಒಂದಲ್ಲ ಒಮ್ಮೆ ಪ್ರತಿಯೊಬ್ಬರಿಗೂ ಆಗಿರುತ್ತೆ , ಒಂದು ನೊಣ ನಮ್ಮನ್ನ ಅಷ್ಟೊಂದು ಘಾಸಿಗೊಳಿಸುತ್ತೆ ಎಂದರೆ ಆ ಜಾಗದಲ್ಲಿ , ಹತ್ತು, ನೂರು ಹೀಗೆ ಕಲ್ಪನೆ ಮಾಡಿಕೊಳ್ಳಿ ಸೃಷ್ಠಿ ಮುಂದೆ ನಾವು ಏನು ಅಲ್ಲ ಅನ್ನಿಸಿಬಿಡುತ್ತೆ .
ಮನುಷ್ಯ ಏನೆಲ್ಲಾ ಸಾಧಿಸಿರಬಹುದು ಪ್ರಕೃತಿಯ ಮುಂದೆ ಅವನು ನೊಣಕಿಂತಲೂ ಕಡಿಮೆ, ಇದೇ ವಾಸ್ತವ, ಪ್ರಕೃತಿ ನಮಗೆ ಸೌಂದರ್ಯವನ್ನ ಕೊಟ್ಟಿದೆ, ಅನೇಕ ವಿಸ್ಮಯಗಳನ್ನ ಸೃಷ್ಠಿಸಿದೆ ಅದೆಲ್ಲವನ್ನು, ಸವಿಯುವ ಆನಂದಿಸು ಹಕ್ಕು ಮಾತ್ರ ನಮ್ಮದು. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ, ಪ್ರಾಣಿ ಸಂಕುಲ ಎಲ್ಲವನ್ನೂ ನಾಶಮಾಡುತ್ತಿದ್ದಾನೆ , ಮುಂದೊಂದು ದಿನ ಪ್ರಕೃತಿ ನಾಶದಿಂದ ಮಾನವ ಸಂಕುಲವೂ ನಾಶವಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾಗಿದೆ, ಜಗತ್ತನ್ನೇ ನಾಶಮಾಡಬಲ್ಲ ಅಣ್ವಸ್ತ್ರ ಕಂಡುಹಿಡಿದವನು ,ಚಂದ್ರನ ಮೇಲೆ ನಡೆದವನು ಯಾರು ಸಹ ಇಂದು ಭೂಮಿಯಮೇಲೆ ಶಾಸ್ವತವಾಗಿ ಬದುಕಲು ಸಾಧ್ಯವಾಗಿಲ್ಲ.
ಅದಕ್ಕಾಗಿ ಜೀವಜಗತ್ತನ್ನೆ ನಾಶಮಾಡಬಲ್ಲ ಅಸ್ತ್ರಗಳು, ಅಂತಹ ಆಲೋಚನೆಗಳು ನಾಶವಾಗಿ ಪ್ರೇಮಜಗತ್ತು ನಿರ್ಮಾಣವಾಗಬೇಕು , ಯಾರನ್ನೂ ಸಹ ಮದ್ದುಗುಂಡುಗಳಿಂದ ಗೆಲ್ಲಲು ಸಾದ್ಯವಿಲ್ಲ, ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿ ನಿಂತಿದೆ ಮದ್ದುಗುಂಡುಗಳಿಂದ ಜಗತ್ತನ್ನ ಗೆಲ್ಲುವ ಭ್ರಮೆಯಲ್ಲಿದ್ದ ಹಿಟ್ಲರ್ ನಾಶವಾಗಿಹೋದ, ಶಸ್ತ್ರವನ್ನ ತ್ಯಜಿಸಿದ ಅಶೋಕ ವಿಶ್ವಕ್ಕೆ ಕರುಣೆ , ಪ್ರೀತಿಯನ್ನ ಸಾರಿ ಸಾಮ್ರಾಟನಾದ.
ಸನಾತನವನ್ನ ತ್ಯಜಿಸಿದ ಬುದ್ಧ,ಬಸವ, ಯೇಸು, ಪೈಗಂಬರ್, ತೀರ್ಥಾಕರ, ಗುರುನಾನಕ್ ಎಲ್ಲಾ ದಾರ್ಶನಿಕರು ಜೀವ ಮತ್ತು ಜೀವನ ಪ್ರೀತಿಯನ್ನ ಸಾರಿದರು ಇದೆಲ್ಲ ಕಣ್ಣೆದುರಿಗೆ ಇದ್ದರು ಮನುಷ್ಯ ಬದಲಾಗಲು ಮನಸ್ಸುಮಾಡುತ್ತಿಲ್ಲ , ಬದಲಾಗದಿದ್ದರೆ ಮುಂದೊಂದು ದಿನ ಪ್ರಕೃತಿ ಅವನನ್ನೆ ಬದಲಿಸುತ್ತದೆ .
ಸುದ್ದಿದಿನ.ಕಾಂ|ವಾಟ್ಸಾಪ್|9980346243