ದಿನದ ಸುದ್ದಿ

ತಾಜ್ ಮಹಲ್ ನ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

Published

on

ಸುದ್ದಿದಿನ,ದೆಹಲಿ: 17 ನೇ ಶತಮಾನ ಸ್ಮಾರಕವಾದ ತಾಜ್ ಮಹಲ್ ವೈಭವವನ್ನು ತುರ್ತಾಗಿ ಮರುಸ್ಥಾಪಿಸುವ ಕಾರ್ಯಕ್ರಮ ಕೈಗೊಳ್ಳ ಬೇಕಿದೆ ಎಂದು ತಾಜ್ ಮಹಲ್ ನ ಸುರಕ್ಷತೆಗೆ ಇನ್ನೂ ಕೈಗೊಳ್ಳದ ಸರ್ಕಾರವನ್ನು ಸುಪ್ರೀಂಕೋರ್ಟ್ ಮೇ1 (ನಿನ್ನೆ) ರಂದು ತರಾಟೆಗೆ ತೆಗೆದುಕೊಂಡಿದೆ.

ವಾಯುಮಾಲಿನ್ಯದಿಂದಾಗಿ ಬಣ್ಣಕಳೆದುಕೊಳ್ಳುತ್ತಿರುವ ಐತಿಹಾಸಿಕ ತಾಜ್ ಮಹಲ್ ನ ಇತ್ತೀಚಿನ ಚಿತ್ರಗಳನ್ನು ನೋಡಿದರೆ ಅದು ಜಗತ್ತಿನ 8ನೇ ಅದ್ಭುತದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದೆ.

ಈ ಹಿಂದೆ ಕಂದು ಬಣ್ಣಕ್ಕೆ ತಿರುಗಿದ್ದ ತಾಜ್ ಮಹಲ್, ಈಗ ಕಂದು ಮತ್ತು ಹಸಿರು ಬಣ್ಣಕ್ಕೆ ತಿರುಗುತ್ತಿದ್ದು ಸರ್ಕಾರ ಕಾಳಜಿ ತೋರುತ್ತಿಲ್ಲ. ಕೂಡಲೇ ತಜ್ಞರ ನೆರವು ಪಡೆದು ಅದನ್ನು ರಕ್ಷಿಸಬೇಕೆಂದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version