ದಿನದ ಸುದ್ದಿ

ಭದ್ರಾವತಿ | ಬರೋಬ್ಬರಿ‌ 2 ಲಕ್ಷ ಒಡವೆ ಕದ್ದ ಕಳ್ಳರ ಬಂಧನ

Published

on

ಸುದ್ದಿದಿನ, ಭದ್ರಾವತಿ : ಭದ್ರಾವತಿ ಗ್ರಾಮಾಂತರ ವೃತ್ತ‌ವ್ಯಾಪ್ತಿಯಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣದ ಇಬ್ಬರು ಆರೋಪಿತರನ್ನು ಬಂಧನ ಹಾಗೂ 50 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 240 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಸೇರಿ ಒಟ್ಟು ಅಂದಾಜು ಮೌಲ್ಯ ರೂ 2,32,500(ರೂಪಾಯಿ ಎರಡು ಲಕ್ಷದ ಮೂವತ್ತೆರಡು ಸಾವಿರದ ಐದು ನೂರು) ಆಭರಣಗಳ ವಶಪಡಿಸಿಕೊಳ್ಳಲಾಗಿದೆ.

ಮನೆಗಳ್ಳತನ ಪ್ರಕರಣಗಳಲ್ಲಿ ಆರೋಪಿತರು ಹಾಗೂ ಕಳುವಿನ ಮಾಲಿನ ಪತ್ತೆ ಬಗ್ಗೆ
ಸುಧಾಕರ್ ನಾಯಕ್ ಡಿವೈಎಸ್.ಪಿ ಭದ್ರಾವತಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ
ಮಂಜುನಾಥ್ ಈ.ಒ ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತ ರವರ ನೇತೃತ್ವದ, ಪಿಎಸ್ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ,ದಿಃ-23-09-2020 ರಂದು ಪ್ರಕರಣಗಳ ಆರೋಪಿತರಾದ ನಾಗರಾಜನಾಯ್ಕ (24 ವರ್ಷ) ವಾಸ ಮಾವಿನಕಟ್ಟೆ ಚನ್ನಗಿರಿ ದಾವಣಗೆರೆ, ಗಣೇಶ ನಾಯ್ಕ (31 ವರ್ಷ)ವಾಸ ಮಾವಿನಕಟ್ಟೆ ಚನ್ನಗಿರಿ ದಾವಣಗೆರೆ ರವರನ್ನು ಬಂಧಿಸಿದ್ದಾರೆ.

ಆರೋಪಿತ ಕಡೆಯಿಂದ ದಿಃ-20-02-2019 ರಂದು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಶೊಕನಗರದ ವಾಸದ ಮನೆಯೊಂದರಲ್ಲಿ ಕಳ್ಳತನ ಮಾಡಿದ 40 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 240 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, ದಿ-19-05-2020 ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಿಗೆರೆ ಗ್ರಾಮದ ವಾಸದ ಮನೆಯೊಂದರಲ್ಲಿ ಕಳ್ಳತನ ಮಾಡಿದ 10 ಗ್ರಾಂ ಬಂಗಾರದ ಆಭರಣಗಳು ಸೇರಿ ಒಟ್ಟು ರೂ 2,32,500(ರೂಪಾಯಿ ಎರಡು ಲಕ್ಷದ ಮೂವತ್ತೆರಡು ಸಾವಿರದ ಐದು ನೂರು) ಮೌಲ್ಯದ
50 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ
240 ಗ್ರಾಂ ತೂಕದ ಬೆಳ್ಳಿಯ ಆಭರಣಗಳ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version